ಸಾಂದರ್ಭಿಕ ಚಿತ್ರ
–ಎ.ಐ ಚಿತ್ರ
ಲಂಡನ್: ಶಿಕ್ಷೆಗೆ ಗುರಿಯಾಗುವ ವಿದೇಶಿ ಅಪರಾಧಿಗಳ ಮೇಲ್ಮನವಿ ಅರ್ಜಿಯ ವಿಚಾರಣೆಗೂ ಮುನ್ನವೇ ಅಂಥವರನ್ನು ಗಡೀಪಾರು ಮಾಡುವ ದೇಶಗಳ ಪಟ್ಟಿಯಲ್ಲಿ ಭಾರತವನ್ನೂ ಸೇರಿಸಲಾಗಿದೆ.
ಬ್ರಿಟನ್‌ಗೆ ವಲಸೆ ಹೋಗುವವರ ಸಂಖ್ಯೆಯನ್ನು ಕಡಿಮೆ ಮಾಡುವ ಕ್ರಮದ ಭಾಗವಾಗಿ ಬ್ರಿಟನ್ ಸರ್ಕಾರ ಈ ಕ್ರಮಕ್ಕೆ ಮುಂದಾಗಿದೆ.
‘ಈಗ ಗಡೀಪಾರು, ನಂತರ ವಿಚಾರಣೆ’ ಯೋಜನೆಯು 23 ದೇಶಗಳ ಅಪರಾಧಿಗಳಿಗೆ ಅನ್ವಯವಾಗಲಿದೆ. ಈ ಮೊದಲು ಎಂಟು ದೇಶಗಳಿಗೆ ಮಾತ್ರ ಅನ್ವಯವಾಗುತ್ತಿತ್ತು. ಯೋಜನೆಯ ಪ್ರಕಾರ, ಈ ದೇಶಗಳ ಅಪರಾಧಿಗಳನ್ನು ಶಿಕ್ಷೆಗೆ ಗುರಿಯಾದ ಕೂಡಲೇ ಗಡೀಪಾರು ಮಾಡಲಾಗುತ್ತದೆ ಎಂದು ಬ್ರಿಟನ್‌ನ ಗೃಹ ಕಚೇರಿಯು ತಿಳಿಸಿದೆ.
ಗಡೀಪಾರಾದ ವಿದೇಶಿಗರು ವಿಡಿಯೊ ಟೆಕ್ನಾಲಜಿ ಮೂಲಕ ಮೇಲ್ಮನವಿ ಅರ್ಜಿ ವಿಚಾರಣೆಗೆ ಹಾಜರಾಗಬಹುದು ಎಂದು ಹೇಳಿದೆ.
‘ನಮ್ಮ ದೇಶದಲ್ಲಿ ಅಪರಾಧ ಎಸಗುವವರಿಗೆ ನಮ್ಮ ವ್ಯವಸ್ಥೆಯನ್ನು ಹಾಳುಗೆಡವಲು ಅವಕಾಶ ನೀಡುವುದಿಲ್ಲ. ಹೀಗಾಗಿ ಅಂಥವರಿಗೆ ಈ ಮೂಲಕ ಸ್ಪಷ್ಟ ಸಂದೇಶ ರವಾನಿಸುತ್ತಿದ್ದೇವೆ. ನಮ್ಮ ನೆಲದ ಕಾನೂನನ್ನು ಗೌರವಿಸಬೇಕು ಮತ್ತು ಪಾಲಿಸಬೇಕು’ ಎಂದು ಗೃಹ ಕಾರ್ಯದರ್ಶಿ ಯವಿಟ್ ಕೂಪರ್ ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.