ADVERTISEMENT

ಬ್ರಿಟನ್‌ನ ಶ್ರೀಮಂತರ ಪಟ್ಟಿಯಲ್ಲಿ ಸುನಕ್‌ ದಂಪತಿ

​ಪ್ರಜಾವಾಣಿ ವಾರ್ತೆ
Published 20 ಮೇ 2022, 15:43 IST
Last Updated 20 ಮೇ 2022, 15:43 IST
ಅಕ್ಷತಾ ಮೂರ್ತಿ ಮತ್ತು ರಿಷಿ ಸುನಕ್‌ ದಂಪತಿ
ಅಕ್ಷತಾ ಮೂರ್ತಿ ಮತ್ತು ರಿಷಿ ಸುನಕ್‌ ದಂಪತಿ   

ಲಂಡನ್‌ (ರಾಯಿಟರ್ಸ್): ಭಾರತೀಯ ಮಾಹಿತಿ ತಂತ್ರಜ್ಞಾನದ ದೈತ್ಯ ಕಂಪನಿಇನ್ಫೋಸಿಸ್‌ನ ಸಂಸ್ಥಾಪಕ ನಾರಾಯಣಮೂರ್ತಿ ಅವರ ಅಳಿಯ, ಹಣಕಾಸು ಸಚಿವ ರಿಷಿ ಸುನಕ್ ಮತ್ತುನಾರಾಯಣಮೂರ್ತಿ ಅವರ ಪುತ್ರಿ ಅಕ್ಷತಾ ಮೂರ್ತಿ ಬ್ರಿಟನ್‌ನ ಅತಿ ಶ್ರೀಮಂತ ನಿವಾಸಿಗಳ 250 ಮಂದಿ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದಾರೆ ಎಂದು ‘ದಿ ಸಂಡೆ ಟೈಮ್ಸ್’ ಪತ್ರಿಕೆಶುಕ್ರವಾರ ವರದಿ ಮಾಡಿದೆ.

ಅಕ್ಷತಾ ಮೂರ್ತಿ ಅವರು ರಿಷಿ ಸುನಕ್‌ ಅವರ ಪತ್ನಿ. ಈ ದಂಪತಿ ಸುಮಾರು ₹8 ಸಾವಿರ ಕೋಟಿ (730 ಮಿಲಿಯನ್ ಪೌಂಡ್‌) ಮೌಲ್ಯದ ಸಂಪತ್ತು ಹೊಂದಿದ್ದು, ಈ ಪಟ್ಟಿಯಲ್ಲಿ 222ನೇ ಸ್ಥಾನ ಪಡೆದಿದ್ದಾರೆ. ಸುನಕ್ ಅವರು ಶ್ರೀಮಂತರ ಪಟ್ಟಿ ಸೇರಲು ಅವರ ಪತ್ನಿ ಬಳಿ ಇರುವ ಸಂಪತ್ತಿನ ಮೌಲ್ಯವೂ ಕಾರಣ ಎಂದು ಅದು ಹೇಳಿದೆ.

ಭಾರತೀಯ ಪ್ರಜೆಯಾದ ಅಕ್ಷತಾ ಮೂರ್ತಿ ಇನ್ಫೋಸಿಸ್‌ ಕಂಪನಿಯ ಸುಮಾರು ಶೇ 0.9 ಷೇರು ಹೊಂದಿದ್ದಾರೆ.

ADVERTISEMENT

₹2.71 ಲಕ್ಷ ಕೋಟಿಗೂಅಧಿಕ ಮೌಲ್ಯದ ಆಸ್ತಿ ಹೊಂದಿರುವ ಭಾರತೀಯ ಮೂಲದ ಹಿಂದೂಜಾ ಸಹೋದರರಾದ ಶ್ರೀ ಮತ್ತು ಗೋಪಿ ಈ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿದ್ದಾರೆ.

‘ಪ್ರತಿ ವರ್ಷ ಶ್ರೀಮಂತರ ಪಟ್ಟಿಗೆ ಹೆಸರು ಸೇರಿಸಲು ಬಯಸುತ್ತಿರುವ ಕೆಲವರು ನಮ್ಮನ್ನು ಸಂಪರ್ಕಿಸುತ್ತಾರೆ. ಆದರೆ, ಸುನಕ್ ಮಾತ್ರ ನಮ್ಮನ್ನು ಸಂಪರ್ಕಿಸಿಲ್ಲ’ ಎಂದು ಪಟ್ಟಿ ಸಿದ್ಧಪಡಿಸಿದ ರಾಬರ್ಟ್ ವಾಟ್ಸ್ ‘ಸ್ಕೈ ನ್ಯೂಸ್‌’ಗೆ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.