ಲಂಡನ್: ‘ಸಲಿಂಗಿ ಜೋಡಿಗೆ ತನ್ನ ಆವರಣದಲ್ಲಿ ಮದುವೆಯಾಗಲು ಅವಕಾಶ ನೀಡಲಾಗುವುದು’ ಎಂದು ಬ್ರಿಟನ್‌ನ ಮೆಥೋಡಿಸ್ಟ್ ಚರ್ಚ್ ಬುಧವಾರ ಘೋಷಿಸಿದೆ.
ಈ ಸಂಬಂಧ ನಡೆಸಲಾದ ಮೆಥೋಡಿಸ್ಟ್ ಸಭೆಯಲ್ಲಿ 254 ಮಂದಿ ಪರವಾಗಿ ಮತ್ತು 46 ಮಂದಿ ವಿರುದ್ಧವಾಗಿ ಮತ ಚಲಾಯಿಸಿದರು.
ಈ ಚರ್ಚ್ 164,000 ಸದಸ್ಯರನ್ನು ಒಳಗೊಂಡಿದ್ದು, ಇದು ಬ್ರಿಟನ್‌ನ ನಾಲ್ಕನೇ ಅತಿ ದೊಡ್ಡ ಚರ್ಚ್ ಆಗಿದೆ.
‘ಇದೊಂದು ಮಹತ್ವದ ಹೆಜ್ಜೆಯಾಗಿದೆ. ಹಲವು ವರ್ಷಗಳ ಹೋರಾಟದ ಬಳಿಕ ಈ ಅವಕಾಶ ಸಿಕ್ಕಿದೆ’ ಎಂದು ಮೆಥೋಡಿಸ್ಟ್ ಚರ್ಚ್‌ನ ಪ್ರಚಾರ ಗುಂಪು ಹೇಳಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.