ADVERTISEMENT

ಬ್ರಿಟನ್‌ನಲ್ಲಿ ಗಾಂಧಿ ಸ್ಮರಣಾರ್ಥ 5 ಪೌಂಡ್‌ಗಳ ಹೊಸ ನಾಣ್ಯ ಬಿಡುಗಡೆ

​ಪ್ರಜಾವಾಣಿ ವಾರ್ತೆ
Published 4 ನವೆಂಬರ್ 2021, 13:41 IST
Last Updated 4 ನವೆಂಬರ್ 2021, 13:41 IST
ಲಂಡನ್‌ನಲ್ಲಿ ಗುರುವಾರ ಮಹಾತ್ಮ ಗಾಂಧಿ ಸ್ಮರಣಾರ್ಥ 5 ಪೌಂಡ್‌ಗಳ ಹೊಸ ನಾಣ್ಯವನ್ನು ಬ್ರಿಟನ್‌ ಹಣಕಾಸು ಸಚಿವ ರಿಷಿ ಸುನಕ್ ಅನಾವರಣಗೊಳಿಸಿದರು (ಪಿಟಿಐ ಚಿತ್ರ)
ಲಂಡನ್‌ನಲ್ಲಿ ಗುರುವಾರ ಮಹಾತ್ಮ ಗಾಂಧಿ ಸ್ಮರಣಾರ್ಥ 5 ಪೌಂಡ್‌ಗಳ ಹೊಸ ನಾಣ್ಯವನ್ನು ಬ್ರಿಟನ್‌ ಹಣಕಾಸು ಸಚಿವ ರಿಷಿ ಸುನಕ್ ಅನಾವರಣಗೊಳಿಸಿದರು (ಪಿಟಿಐ ಚಿತ್ರ)   

ಲಂಡನ್: ಮಹಾತ್ಮ ಗಾಂಧಿ ಸ್ಮರಣಾರ್ಥ ಅವರ ಜೀವನ ಮತ್ತು ಪರಂಪರೆ ಕೊಂಡಾಡುವ 5 ಪೌಂಡ್‌ನ ಹೊಸ ನಾಣ್ಯವನ್ನು ದೀಪಾವಳಿ ಹಬ್ಬದ ಅಂಗವಾಗಿ ಗುರುವಾರ ಬ್ರಿಟನ್‌ ಹಣಕಾಸು ಸಚಿವ ರಿಷಿ ಸುನಕ್ ಅವರು ಅನಾವರಣಗೊಳಿಸಿದರು.

ಚಿನ್ನ ಮತ್ತು ಬೆಳ್ಳಿ ಸೇರಿದಂತೆ ಹಲವು ಮಾನದಂಡಗಳಲ್ಲಿ ಈ ನಾಣ್ಯ ಲಭ್ಯವಿದೆ. ಸಂಗ್ರಹ ಯೋಗ್ಯವಾದ ಈ ನಾಣ್ಯವನ್ನು ಹೀನಾ ಗ್ಲೋವರ್ ವಿನ್ಯಾಸಗೊಳಿಸಿದ್ದಾರೆ. ಗಾಂಧಿಯವರ ಅತ್ಯಂತ ಪ್ರಸಿದ್ಧ ಉಲ್ಲೇಖಗಳಲ್ಲಿ ಒಂದಾದ ‘ಮೈ ಲೈಫ್ ಈಸ್ ಮೈ ಮೆಸೇಜ್’ ಜೊತೆಗೆ ಭಾರತದ ರಾಷ್ಟ್ರೀಯ ಹೂವು ಕಮಲದ ಚಿತ್ರವನ್ನು ಒಳಗೊಂಡಿದೆ.

‘ಈ ನಾಣ್ಯವು ವಿಶ್ವದಾದ್ಯಂತ ಲಕ್ಷಾಂತರ ಜನರಿಗೆ ಸ್ಫೂರ್ತಿ ನೀಡಿದ ಪ್ರಭಾವಿ ನಾಯಕನಿಗೆ ಸೂಕ್ತವಾದ ಗೌರವವಾಗಿದೆ’ ಎಂದು ಸುನಕ್ ಹೇಳಿದರು.

ADVERTISEMENT

Lok Sabha Elections Results 2024 |ನರೇಂದ್ರ ಮೋದಿ ಅವರ 'ವಿಕಸಿತ ಭಾರತ' ಅಥವಾ ರಾಹುಲ್ ಗಾಂಧಿ ಅವರ ಇಂಡಿಯಾ ಐಕ್ಯ ಭಾರತ? ಜಗತ್ತಿನ ಅತಿದೊಡ್ಡ ಪ್ರಜಾಪ್ರಭುತ್ವದ 18ನೇ ಲೋಕಸಭೆಗೆ ನಡೆದ ಚುನಾವಣೆ ಫಲಿತಾಂಶದ ಕ್ಷಣ ಕ್ಷಣದ ಮಾಹಿತಿ, ವಿಶ್ವಾಸಾರ್ಹ ವಿಶ್ಲೇಷಣೆ, ಅಂಕಿ ಅಂಶಗಳಿಗಾಗಿ ಪ್ರಜಾವಾಣಿ ನೋಡಿ. ಇದರ ಜೊತಗೆ, ಆಂಧ್ರಪ್ರದೇಶ ಮತ್ತು ಒಡಿಶಾ ವಿಧಾನಸಭೆ ಚುನಾವಣೆಯ ಫಲಿತಾಂಶವೂ ಇಲ್ಲೇ ಲಭ್ಯ. ಪ್ರಜಾವಾಣಿಯನ್ನು ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಫಾಲೋ ಮಾಡಲು ಮರೆಯದಿರಿ.