ADVERTISEMENT

‘ಬ್ರಿಟನ್: ಸುನಕ್ ತಪ್ಪೆಸಗಿಲ್ಲ’

ಪಿಟಿಐ
Published 27 ಏಪ್ರಿಲ್ 2022, 18:59 IST
Last Updated 27 ಏಪ್ರಿಲ್ 2022, 18:59 IST
ಅಕ್ಷತಾ ಮೂರ್ತಿ–ರಿಷಿ ಸುನಕ್
ಅಕ್ಷತಾ ಮೂರ್ತಿ–ರಿಷಿ ಸುನಕ್   

ಲಂಡನ್: ಪತ್ನಿ ಅಕ್ಷತಾ ಮೂರ್ತಿಯವರಿಗೆ ಸಂಬಂಧಿಸಿದ ತೆರಿಗೆ ಪಾವತಿ ಹಾಗೂ ತಾವು ಹೊಂದಿರುವ ಅಮೆರಿಕದ ಗ್ರೀನ್‌ ಕಾರ್ಡ್‌ ವಿಷಯದಲ್ಲಿ ಹಣಕಾಸು ಸಚಿವ ರಿಷಿ ಸುನಕ್‌ ಅವರು ಯಾವುದೇ ತಪ್ಪು ಮಾಡಿಲ್ಲ ಎಂದು ಸಚಿವರ ನೀತಿ ಸಂಹಿತೆಗೆ ಸಂಬಂಧಿಸಿ ಬ್ರಿಟನ್‌ ಸರ್ಕಾರದ ಸ್ವತಂತ್ರ ಸಲಹೆಗಾರ ಬುಧವಾರ ಹೇಳಿದ್ದಾರೆ.

ಸಲಹೆಗಾರರಾದ ಲಾರ್ಡ್ ಕ್ರಿಸ್ಟೋಫರ್ ಗೀಟ್ ಅವರು ರಿಷಿ ಸುನಕ್‌ ಕುಟುಂಬ ವಿರುದ್ಧದ ಆರೋಪಗಳ ಕುರಿತು ತನಿಖೆ ನಡೆಸಿದ್ದಾರೆ. ‘ಸಚಿವರು ಪಾಲಿಸಬೇಕಾಗಿರುವ ನೀತಿ ಸಂಹಿತೆಯನ್ನು ಸುನಕ್‌ ಅನುಸರಿಸುತ್ತಿದ್ದಾರೆ’ ಎಂದು ಪ್ರಧಾನಿ ಬೋರಿಸ್ ಜಾನ್ಸನ್‌ ಅವರಿಗೆ ಸಲ್ಲಿಸಿರುವ ವರದಿಯಲ್ಲಿ ಗೀಟ್ ತಿಳಿಸಿದ್ದಾರೆ.

ಕುಟುಂಬದ ಆಸ್ತಿ ಮತ್ತು ಹಣಕಾಸಿಗೆ ಸಂಬಂಧಿಸಿದಂತೆ ಟೀಕೆ ವ್ಯಕ್ತವಾದ ಹಿನ್ನೆಲೆಯಲ್ಲಿ, ತಮ್ಮಿಂದ ಆಸ್ತಿ ಘೋಷಣೆ ನಿಯಮಗಳ ಉಲ್ಲಂಘನೆಯಾಗಿರುವ ಬಗ್ಗೆ ಪರಿಶೀಲಿಸಬೇಕು ಎಂದು ರಿಷಿ ಸುನಕ್‌ ಅವರು ಪ್ರಧಾನಿ ಜಾನ್ಸನ್ ಅವರಿಗೆ ಮನವಿ ಮಾಡಿದ್ದರು.

ADVERTISEMENT

ಅಕ್ಷತಾ ಅವರು ಭಾರತದ ಉದ್ಯಮಿ, ಇನ್ಫೋಸಿಸ್‌ ಸ್ಥಾಪಕ ಎನ್.ಆರ್.ನಾರಾಯಣ ಮೂರ್ತಿ ಅವರ ಪುತ್ರಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.