ADVERTISEMENT

ಭಾರತ ಭೇಟಿ ರದ್ದುಗೊಳಿಸಲು ಬ್ರಿಟನ್‌ ಪ್ರಧಾನಿಗೆ ವಿಪಕ್ಷದ ಒತ್ತಾಯ

ಪಿಟಿಐ
Published 18 ಏಪ್ರಿಲ್ 2021, 13:52 IST
Last Updated 18 ಏಪ್ರಿಲ್ 2021, 13:52 IST
ಬೋರಿಸ್‌ ಜಾನ್ಸನ್‌
ಬೋರಿಸ್‌ ಜಾನ್ಸನ್‌   

ಲಂಡನ್‌: ರೂಪಾಂತರಿತ ಕೊರೊನಾ ವೈರಸ್‌ನಿಂದಾಗಿ ಭಾರತದಲ್ಲಿ ಕೋವಿಡ್‌–19 ತೀವ್ರವಾಗಿ ಹಬ್ಬುತ್ತಿದೆ. ಹೀಗಾಗಿಪ್ರಧಾನಿ ಬೋರಿಸ್‌ ಜಾನ್ಸನ್‌ ಅವರು ಭಾರತದ ಭೇಟಿಯನ್ನು ರದ್ದುಗೊಳಿಸಬೇಕು ಎಂಬ ಒತ್ತಾಯ ಕೇಳಿಬಂದಿದ್ದು, ಇದಕ್ಕೆ ಬ್ರಿಟನ್‌ನ ವಿರೋಧ ಪಕ್ಷ ಭಾನುವಾರ ದನಿಗೂಡಿಸಿದೆ.

ಪ್ರಧಾನಿ ಬೋರಿಸ್‌ ಜಾನ್ಸನ್‌ ಅವರು ಏ. 26ರಿಂದ ಭಾರತದ ಪ್ರವಾಸ ನಿಗದಿಯಾಗಿತ್ತು. ಈ ವೇಳೆ ಅವರು ಪ್ರಧಾನಿ ನರೇಂದ್ರ ಮೋದಿ ಅವರೊಂದಿಗೆ ಮಾತುಕತೆ ನಡೆಸುವುದು ಹಾಗೂ ಇತರ ಕಾರ್ಯಕ್ರಮಗಳಲ್ಲಿ ಭಾಗಿಯಾಗುವುದು ನಿಗದಿಯಾಗಿತ್ತು.

ಆದರೆ, ಭಾರತದಲ್ಲಿ ರೂಪಾಂತರಿತ ಕೊರೊನಾ ವೈರಸ್‌ ಸೋಂಕಿನ ಪ್ರಕರಣಗಳು ಹೆಚ್ಚುತ್ತಿರುವ ಕಾರಣ, ಏ. 26ರಂದು ಮಾತ್ರ ಜಾನ್ಸನ್‌ ಅವರು ಭಾರತಕ್ಕೆ ಭೇಟಿ ನೀಡುವರು ಎಂದು ಹೇಳಲಾಗಿತ್ತು.

ADVERTISEMENT

‘ಸ್ಕೈ ನ್ಯೂಸ್‌’ನೊಂದಿಗೆ ಮಾತನಾಡಿದ ವಿರೋಧ ಪಕ್ಷ ಲೇಬರ್‌ ಪಾರ್ಟಿ ಮುಖಂಡ ಸ್ವೀವ್‌ ರೀಡ್‌, ‘ಪ್ರಧಾನಿ ಜಾನ್ಸನ್‌ ಅವರು ಭಾರತಕ್ಕೆ ತೆರಳುವ ಬದಲು ಅಲ್ಲಿನ ಸರ್ಕಾರದೊಂದಿಗಿನ ಮಾತುಕತೆಯನ್ನು ಜೂಮ್‌ ಮೂಲಕ ಯಾಕೆ ನಡೆಸಬಾರದು’ ಎಂದು ಪ್ರಶ್ನಿಸಿದ್ದಾರೆ.

ಎರಡು ಬಾರಿ ರೂಪಾಂತರಗೊಂಡಿರುವ ವೈರಸ್‌ ಭಾರತದಲ್ಲಿ ಪತ್ತೆಯಾಗಿದೆ. ಈ ರೂಪಾಂತರಿತ ವೈರಸ್‌ ಸೋಂಕಿನ 77 ಪ್ರಕರಣಗಳು ಕಳೆದ ತಿಂಗಳು ಬ್ರಿಟನ್‌ನಲ್ಲಿ ವರದಿಯಾಗಿವೆ ಎಂದು ಬ್ರಿಟನ್‌ನ ಪಬ್ಲಿಕ್‌ ಹೆಲ್ತ್‌ ಇಂಗ್ಲೆಂಡ್‌ (ಪಿಎಚ್‌ಇ) ಹೇಳಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.