ADVERTISEMENT

ರಿಷಿ ಸುನಕ್‌ ಆಸ್ತಿ ಘೋಷಣೆಯ ಪರಿಶೀಲನೆಗೆ ಬ್ರಿಟನ್‌ ಪ್ರಧಾನಿ ಒಪ್ಪಿಗೆ

ರಾಯಿಟರ್ಸ್
Published 11 ಏಪ್ರಿಲ್ 2022, 16:16 IST
Last Updated 11 ಏಪ್ರಿಲ್ 2022, 16:16 IST
ರಿಷಿ ಸುನಕ್‌
ರಿಷಿ ಸುನಕ್‌   

ಲಂಡನ್‌: ಬ್ರಿಟನ್‌ ಹಣಕಾಸು ಸಚಿವ ರಿಷಿ ಸುನಕ್‌ ಅವರ ಕುಟುಂಬದ ಆಸ್ತಿ ಮತ್ತು ಹಣಕಾಸಿಗೆ ಸಂಬಂಧಿಸಿದಂತೆ ಟೀಕೆ ವ್ಯಕ್ತವಾದ ಹಿನ್ನೆಲೆಯಲ್ಲಿ, ತಮ್ಮಿಂದ ಆಸ್ತಿ ಘೋಷಣೆ ನಿಯಮಗಳ ಉಲ್ಲಂಘನೆಯಾಗಿದೆಯೇ, ಇಲ್ಲವೋ ಎಂಬುದನ್ನುನಿರ್ಧರಿಸಲು ಆಸ್ತಿ ಘೋಷಣೆಯನ್ನು ಪರಿಶೀಲಿಸಬೇಕೆಂದು ರಿಷಿ ಅವರ ಮನವಿಗೆ ಪ್ರಧಾನಿ ಬೋರಿಸ್‌ ಜಾನ್ಸನ್‌ ಸಮ್ಮತಿಸಿದ್ದಾರೆ ಎಂದು ಪ್ರಧಾನಿಯ ವಕ್ತಾರರು ತಿಳಿಸಿದ್ದಾರೆ.

ಈ ಬಗ್ಗೆ ಸುನಕ್‌ ಅವರು ಭಾನುವಾರ ಪ್ರಧಾನಿ ಜಾನ್ಸನ್‌ ಅವರಿಗೆ ಪತ್ರ ಬರೆದಿದ್ದರು. ಚಾನ್ಸಲರ್‌ ಮೂಲಕ ಬಂದ ಮನವಿಯನ್ನು ಪ್ರಧಾನಿ ಒಪ್ಪಿದ್ದಾರೆ. ಜಾನ್ಸನ್‌ ಅವರು ರಿಷಿ ಬಗ್ಗೆ ವಿಶ್ವಾಸ ಹೊಂದಿದ್ದಾರೆ ಅವರು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT