ADVERTISEMENT

ರಷ್ಯಾದ 386 ಜನಪ್ರತಿನಿಧಿಗಳ ಮೇಲೆ ಬ್ರಿಟನ್‌ ನಿರ್ಬಂಧ

ಏಜೆನ್ಸೀಸ್
Published 11 ಮಾರ್ಚ್ 2022, 13:39 IST
Last Updated 11 ಮಾರ್ಚ್ 2022, 13:39 IST
ಬ್ರಿಟನ್‌ನಲ್ಲಿರುವ ರಷ್ಯಾದ ಚೆಲ್ಸಿಯಾ ಫುಟಬಾಲ್‌ ಕ್ಲಬ್‌ನ ಆಸ್ತಿಯನ್ನು ಮುಟ್ಟುಗೋಲು ಮಾಡಲಾಗಿದೆ.
ಬ್ರಿಟನ್‌ನಲ್ಲಿರುವ ರಷ್ಯಾದ ಚೆಲ್ಸಿಯಾ ಫುಟಬಾಲ್‌ ಕ್ಲಬ್‌ನ ಆಸ್ತಿಯನ್ನು ಮುಟ್ಟುಗೋಲು ಮಾಡಲಾಗಿದೆ.   

ಲಂಡನ್‌: ಉಕ್ರೇನ್‌ ಮೇಲೆ ದಾಳಿ ನಡೆಸಲು ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್‌ ಅವರನ್ನು ಬೆಂಬಲಿಸಿದ ರಷ್ಯಾ ಸಂಸತ್‌ನ 386 ಸದಸ್ಯರ ಬ್ರಿಟನ್‌ ಪ್ರಯಾಣಕ್ಕೆ ಹಾಗೂ ಇಲ್ಲಿರುವ ಅವರ ಆಸ್ತಿಗಳ ಮೇಲೆ ಬ್ರಿಟನ್‌ ಸರ್ಕಾರ ನಿರ್ಬಂಧ ಹೇರಿದೆ.

ಪೂರ್ವ ಉಕ್ರೇನ್‌ನ ಲುಹಾನ್ಸ್ಕ್‌ ಮತ್ತು ಡೊನೆಟ್ಸ್ಕ್‌ ಪ್ರದೇಶವನ್ನುಗಣರಾಜ್ಯ ಎಂದು ಗುರುತಿಸುವ ಪ್ರಸ್ತಾವದ ಪರವಾಗಿ ಮತ ಹಾಕಿದ ರಷ್ಯಾದ ಸಂಸದರ ಮೇಲೆ ಈ ನಿರ್ಬಂಧ ಹೇರಲಾಗಿದೆ. ಉಕ್ರೇನ್‌ ಮೇಲೆ ಭೀಕರ ದಾಳಿ ನಡೆಸಲು ಅಧ್ಯಕ್ಷ ಪುಟಿನ್‌ಗೆ ನೆರವಾದವರನ್ನೂ ನಾವು ಗುರಿಯಾಗಿಸಿಕೊಂಡಿದ್ದೇವೆ. ಯುದ್ಧ ನಿಲ್ಲಿಸುವವರೆಗೂ ನಾವು ರಷ್ಯಾದ ಮೇಲಿನ ನಿರ್ಬಂಧಗಳನ್ನು ಮುಂದುವರೆಸಲಿದ್ದೇವೆ ಎಂದು ಬ್ರಿಟನ್‌ ವಿದೇಶಾಂಗ ಕಾರ್ಯದರ್ಶಿ ಲಿಜ್‌ ಟ್ರಸ್‌ ತಿಳಿಸಿದ್ದಾರೆ.

ರಷ್ಯಾದ ಶ್ರೀಮಂತ ಮತ್ತು ರಾಜಕಾರಣಿ ರೋಮನ್‌ ಅಬ್ರಮೊವಿಚ್‌ ಒಡೆತನದ ಚೆಲ್ಸಿಯಾ ಫುಟಬಾಲ್‌ ಕ್ಲಬ್‌ನ ಆಸ್ತಿಯನ್ನು ಗುರುವಾರ ಮುಟ್ಟುಗೋಲು ಹಾಕಿಕೊಳ್ಳಲಾಗಿತ್ತು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.