ADVERTISEMENT

ಕಾಬೂಲ್‌ ವಿಮಾನ ನಿಲ್ದಾಣ ದೂರ ಉಳಿಯುವಂತೆ ತನ್ನ ಪ್ರಜೆಗಳಿಗೆ ಇಂಗ್ಲೆಂಡ್‌ ಆಗ್ರಹ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 26 ಆಗಸ್ಟ್ 2021, 6:59 IST
Last Updated 26 ಆಗಸ್ಟ್ 2021, 6:59 IST
ಕಾಬೂಲ್‌ ವಿಮಾನ ನಿಲ್ದಾಣ
ಕಾಬೂಲ್‌ ವಿಮಾನ ನಿಲ್ದಾಣ   

ಲಂಡನ್: ಅಫ್ಗಾನಿಸ್ತಾನದ ಅತಂತ್ರ ಪರಿಸ್ಥಿತಿಯ ಬಗ್ಗೆ ಆತಂಕ ವ್ಯಕ್ತಪಡಿಸಿರುವ ಇಂಗ್ಲೆಂಡ್‌, ಕಾಬೂಲ್‌ ವಿಮಾನ ನಿಲ್ದಾಣದತ್ತ ಹೋಗದಂತೆ ಮತ್ತು ಸುರಕ್ಷಿತ ಸ್ಥಳಗಳಲ್ಲಿ ಉಳಿಯುವಂತೆ ತನ್ನ ನಾಗರಿಕರಿಗೆ ಮನವಿ ಮಾಡಿದೆ.

ಸದ್ಯ ಅಫ್ಗಾನಿಸ್ತಾನದಲ್ಲಿ ರಸ್ತೆ ಮೂಲಕ ಓಡಾಡುವುದು ಅತ್ಯಂತ ಅಪಾಯಕಾರಿಯಾಗಿದೆ ಎಂದುಇಂಗ್ಲೆಂಡ್‌ ವಿದೇಶಾಂಗ ಸಚಿವಾಲಯ ಪ್ರಕಟಣೆಯಲ್ಲಿ ತಿಳಿಸಿರುವುದಾಗಿ ಸ್ಫುಟ್ನಿಕ್‌ ವರದಿ ಮಾಡಿದೆ.

ʼಅಫ್ಗಾನಿಸ್ತಾನದಲ್ಲಿನ ಭದ್ರತಾ ಪರಿಸ್ಥಿತಿಯು ಅತಂತ್ರವಾಗಿದೆ. ಭಯೋತ್ಪಾದಕರ ದಾಳಿ ಬೆದರಿಕೆ ನಿರಂತರವಾಗಿದೆ ಮತ್ತು ಇನ್ನಷ್ಟು ಹೆಚ್ಚಾಗಿದೆ. ಕಾಬೂಲ್‌ನ ಹಮೀದ್ ಕರ್ಜೈ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದತ್ತ ತೆರಳಿದಿರಿ. ಒಂದು ವೇಳೆ ನೀವು ವಿಮಾನ ನಿಲ್ದಾಣದ ಪ್ರದೇಶದಲ್ಲಿದ್ದರೆ, ಸುರಕ್ಷಿತ ಪ್ರದೇಶಗಳತ್ತ ತೆರಳಿ. ಮುಂದಿನ ಸೂಚನೆಗಳು ಬರುವವರೆಗೆ ಅಲ್ಲಿಯೇ ಇರಿʼ ಎಂದು ತಿಳಿಸಿದೆ.

ʼನಾಗರಿಕ ವಿಮಾನಗಳು ಸದ್ಯ ಕಾರ್ಯಾಚರಣೆ ನಡೆಸುತ್ತಿಲ್ಲ. ಬೇರೆ ರೀತಿಯಲ್ಲಿ ನೀವು ಅಫ್ಗಾನಿಸ್ತಾನ ತೊರೆಯಲು ಸಾಧ್ಯವಿದ್ದರೆ, ಬೇಗನೆ ಆ ರೀತಿ ಮಾಡಿʼ ಎಂದೂ ಸಲಹೆ ನೀಡಿದೆ.

ಕಾಬೂಲ್‌ ವಿಮಾನ ನಿಲ್ದಾಣದ ದಾರಿಯನ್ನು ನಿರ್ಬಂಧಿಸಿದ್ದೇವೆ. ಈ ರಸ್ತೆಗಳಲ್ಲಿ ಸಾಗಲು ವಿದೇಶಿಗರನ್ನು ಹೊರತುಪಡಿಸಿ ಯಾರಿಗೂ ಅವಕಾಶ ನೀಡುವುದಿಲ್ಲ ಎಂದು ತಾಲಿಬಾನ್‌ ಹೇಳಿದ ಬಳಿಕ ಇಂಗ್ಲೆಂಡ್‌ ಈ ಎಚ್ಚರಿಕೆಯ ಸಂದೇಶ ರವಾನಿಸಿದೆ.

ಇವನ್ನೂ ಓದಿ
*

*
*
*
*
*
*
​*
*
*
*
*
*

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.