ಲಂಡನ್: ಮುಂದಿನ ರಾಷ್ಟ್ರೀಯ ಚುನಾವಣೆಗೂ ಮುನ್ನ ಮತದಾನದ ವಯಸ್ಸನ್ನು 18ರಿಂದ 16ಕ್ಕೆ ಇಳಿಸಲಾಗುವುದು ಎಂದು ಬ್ರಿಟನ್ ಸರ್ಕಾರ ಗುರುವಾರ ಘೋಷಿಸಿದೆ.
ಪ್ರಜಾಪ್ರಬುತ್ವದಲ್ಲಿ ಪ್ರಜೆಗಳ ಪಾಲ್ಗೊಳ್ಳುವಿಕೆಯನ್ನು ಹೆಚ್ಚಿಸುವ ಭಾಗವಾಗಿ ಈ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಅದು ಹೇಳಿದೆ.
2024ರಲ್ಲಿ ಬ್ರಿಟನ್ ಸಂಸತ್ತಿಗೆ ನಡೆದ ಚುನಾವಣೆಯಲ್ಲಿ ಗೆಲುವು ಸಾಧಿಸುವುದಕ್ಕೂ ಮುನ್ನ ಅಲ್ಲಿನ ಲೇಬರ್ ಪಕ್ಷವು ಮತದಾನದ ವಯಸ್ಸನ್ನು ಕಡಿಮೆಗೊಳಿಸುವುದಾಗಿ ಪ್ರತಿಜ್ಞೆ ಮಾಡಿತ್ತು.
ಈಗಾಗಲೇ ಸ್ಕಾಟ್ಲೆಂಡ್ ಮತ್ತು ವೇಲ್ಸ್‌ನಲ್ಲಿ ಸ್ಥಳೀಯ ಮತ್ತು ಪ್ರಾದೇಶಿಕ ಚುನಾವಣೆಗಳಲ್ಲಿ 16 ಮತ್ತು 17 ವರ್ಷದವರಿಗೆ ಮತ ಚಲಾಯಿಸಲು ಅವಕಾಶ ಕಲ್ಪಿಸಲಾಗಿದೆ. ಈಕ್ವೆಡಾರ್, ಆಸ್ಟ್ರಿಯಾ ಮತ್ತು ಬ್ರೆಜಿಲ್ ದೇಶಗಳಲ್ಲಿ 16 ವರ್ಷವಾದವರಿಗೆ ಮತದಾನದ ಹಕ್ಕು ನೀಡಲಾಗಿದೆ. ಈ ದೇಶಗಳ ಸಾಲಿಗೆ ಬ್ರಿಟನ್ ಸಹ ಸೇರಲಿದೆ.
ಈ ಬದಲಾವಣೆಯನ್ನು ಸಂಸತ್ತು ಅಂಗೀಕರಿಸಬೇಕಿದೆ. ಬ್ರಿಟನ್‌ನಲ್ಲಿ ಮುಂದಿನ ರಾಷ್ಟ್ರೀಯ ಚುನಾವಣೆ 2029ರಲ್ಲಿ ನಡೆಯಬೇಕಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.