ವಿಶ್ವಸಂಸ್ಥೆ: ಉಕ್ರೇನ್ ಸಂಘರ್ಷವು ದಕ್ಷಿಣ ದೇಶಗಳಲ್ಲಿನ ತೈಲ ಬೆಲೆ ಸೇರಿದಂತೆ ವಿವಿಧ ಕ್ಷೇತ್ರಗಳ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತಿದೆ ಎಂದು ಭಾರತ ಹೇಳಿದೆ.
ರಷ್ಯಾ ಆಕ್ರಮಿತ ಉಕ್ರೇನ್‌ನ ಪ್ರದೇಶಗಳಲ್ಲಿನ ಪರಿಸ್ಥಿತಿ ಕುರಿತಂತೆ ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ನಡೆದ ಚರ್ಚೆಯಲ್ಲಿ ಭಾರತದ ಕಾಯಂ ಪ್ರತಿನಿಧಿ ಪರ್ವತನೇನಿ ಹರೀಶ್ ಮಾತನಾಡಿದರು.
ಉಕ್ರೇನ್‌ನಲ್ಲಿನ ಸ್ಥಿತಿಯ ಬಗ್ಗೆ ಕಳವಳ ವ್ಯಕ್ತಪಡಿಸಿದ ಅವರು, ‘ಮುಗ್ಧ ಜೀವಗಳ ಸಾವನ್ನು ಒಪ್ಪಲಾಗದು. ಯುದ್ಧದಿಂದ ಎಂದಿಗೂ ಪರಿಹಾರ ಸಾಧ್ಯವಿಲ್ಲ’ ಎಂದು ಹೇಳಿದರು.
‘ರಾಜತಾಂತ್ರಿಕ ಪ್ರಯತ್ನಗಳು ಯುದ್ಧವನ್ನು ಕೊನೆಗೊಳಿಸುವ ಮತ್ತು ಶಾಶ್ವತ ಶಾಂತಿಯನ್ನು ಸ್ಥಾಪಿಸುವ ಭರವಸೆ ಹೊಂದಿವೆ’ ಎಂದರು.
‘ನಮ್ಮ ದೃಷ್ಟಿಕೋನದಲ್ಲಿ ನೊಂದವರ ಧ್ವನಿ ಆಲಿಸಿ, ಸಮಸ್ಯೆಗಳನ್ನು ಪರಿಹರಿಸಬೇಕು. ಶಾಶ್ವತ ಶಾಂತಿ ಸ್ಥಾಪನೆಗಾಗಿ ತುಂಬು ಹೃದಯದಿಂದ ಎಲ್ಲ ಪಾಲುದಾರರು ಭಾಗಿಯಾಗಬೇಕು. ಬದ್ಧತೆ ನಿರ್ಣಾಯಕವಾಗಿರಬೇಕು’ ಎಂದಿರುವ ಭಾರತವು, ಈ ದಿಕ್ಕಿನಲ್ಲಿ ‘ಇತ್ತೀಚಿನ ಸಕಾರಾತ್ಮಕ ಬೆಳವಣಿಗೆ’ಗಳನ್ನು ಸ್ವಾಗತಿಸುತ್ತದೆ ಎಂದು ಸಭೆಯಲ್ಲಿ ಪ್ರತಿಪಾದಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.