ADVERTISEMENT

ಉಕ್ರೇನ್‌ನಲ್ಲಿ ಸಾವಿನ ಸಂಖ್ಯೆ ವರದಿಯಾಗಿದ್ದಕ್ಕಿಂತಲೂ ಹೆಚ್ಚು: ವಿಶ್ವಸಂಸ್ಥೆ

ರಾಯಿಟರ್ಸ್
Published 10 ಮೇ 2022, 12:51 IST
Last Updated 10 ಮೇ 2022, 12:51 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಜಿನೀವಾ: ಕಳೆದ 11 ವಾರಗಳಿಂದ ಉಕ್ರೇನ್‌ ಮೇಲೆ ರಷ್ಯಾ ನಡೆಸುತ್ತಿರುವ ದಾಳಿಯಲ್ಲಿ ಮೃತಪಟ್ಟವರ ಅಧಿಕೃತ ಸಂಖ್ಯೆ 3,381 ಆಗಿದ್ದು, ವಾಸ್ತವವಾಗಿ ಮೃತರ ಪ್ರಮಾಣ ಸಾವಿರಾರು ಸಂಖ್ಯೆಯಲ್ಲಿ ಹೆಚ್ಚಿದೆ ಎಂದು ವಿಶ್ವಸಂಸ್ಥೆ ಮಾನವ ಹಕ್ಕು ಮೇಲ್ವಿಚಾರಣೆ ಮಿಷನ್‌ ಮಂಗಳವಾರ ಹೇಳಿದೆ.

ಸ್ಫೋಟ, ಕ್ಷಿಪಣಿ ಹಾಗೂ ವೈಮಾನಿಕ ದಾಳಿಗಳಿಂದ ಬಹುತೇಕ ಸಾವುಗಳು ಸಂಭವಿಸಿವೆ ಎಂದು ಉಕ್ರೇನ್‌ನಲ್ಲಿ ಮೇಲ್ವಿಚಾರಣೆ ನಡೆಸುತ್ತಿರುವ 55 ಸದಸ್ಯರನ್ನು ಒಳಗೊಂಡ ಸಂಸ್ಥೆಯು ಹೇಳಿದೆ.

‘ಅಂದಾಜಿನ ಆಧಾರದ ಮೇಲೆ ನಾವು ಕೆಲಸ ಮಾಡುತ್ತಿದ್ದೇವೆ. ಈಗ ನಾವು ನೀಡಿರುವ ಸಾವಿನ ಲೆಕ್ಕಕ್ಕಿಂತಲೂ ಸಾವಿರಾರು ಸಂಖ್ಯೆ ಹೆಚ್ಚಿದೆ’ ಎಂದು ಮೇಲ್ವಿಚಾರಣೆ ತಂಡದ ಮಟಿಲ್ಡಾ ಬೊಗ್ನರ್‌ ತಿಳಿಸಿದ್ದಾರೆ.

ADVERTISEMENT

‘ಮರಿಯುಪೋಲ್‌ ನಗರ ನಮಗೆ ಅತಿ ದೊಡ್ಡ ಸವಾಲಾಗಿದೆ. ಅಲ್ಲಿಗೆ ಪ್ರವೇಶಿಸುವುದು ಮತ್ತು ನಿಖರ ಮಾಹಿತಿ ಸಂಗ್ರಹಿಸುವುದು ಕಷ್ಟಕರವಾಗಿದೆ’ ಎಂದಿದ್ದಾರೆ.

ರಷ್ಯಾ ಫೆಬ್ರುವರಿ 24ರಿಂದ ಉಕ್ರೇನ್‌ ಮೇಲೆ ವಿಶೇಷ ಮಿಲಿಟರಿ ಕಾರ್ಯಾಚರಣೆ ಹೆಸರಿನಡಿ ದಾಳಿ ನಡೆಸುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.