ADVERTISEMENT

ರಷ್ಯಾ ಮೇಲೆ 50ಕ್ಕೂ ಹೆಚ್ಚು ಉಕ್ರೇನ್‌ ಡ್ರೋನ್‌ಗಳ ದಾಳಿ

ಅತಿ ದೊಡ್ಡ ವೈಮಾನಿಕ ಸಮರ * ವಿದ್ಯುತ್‌ ಉಪಕೇಂದ್ರಕ್ಕೆ ಹಾನಿ

ಏಜೆನ್ಸೀಸ್
Published 5 ಏಪ್ರಿಲ್ 2024, 12:32 IST
Last Updated 5 ಏಪ್ರಿಲ್ 2024, 12:32 IST
<div class="paragraphs"><p>ರಷ್ಯಾ ಸೇನೆ ಹೊಡೆದುರುಳಿಸಿದ ಉಕ್ರೇನ್‌ ಡ್ರೋನ್‌ನಲ್ಲಿ ಬೆಂಕಿ ಹತ್ತಿ ಉರಿಯುತ್ತಿರುವುದು</p></div>

ರಷ್ಯಾ ಸೇನೆ ಹೊಡೆದುರುಳಿಸಿದ ಉಕ್ರೇನ್‌ ಡ್ರೋನ್‌ನಲ್ಲಿ ಬೆಂಕಿ ಹತ್ತಿ ಉರಿಯುತ್ತಿರುವುದು

   

(ರಾಯಿಟರ್ಸ್‌ ಚಿತ್ರ)

ಕೀವ್‌: ರಷ್ಯಾದ ಗಡಿಭಾಗದಲ್ಲಿರುವ ರೋಸ್ಟೊವ್‌ ಪ್ರದೇಶದ ಮೇಲೆ ಉಕ್ರೇನ್‌ ಸೇನೆಯು 50ಕ್ಕೂ ಹೆಚ್ಚು ಡ್ರೋನ್‌ಗಳ ಮೂಲಕ ದಾಳಿ ಮಾಡಿದೆ ಎಂದು ಮಾಸ್ಕೊದ ರಕ್ಷಣಾ ಅಧಿಕಾರಿಗಳು ಶುಕ್ರವಾರ ತಿಳಿಸಿದ್ದಾರೆ.

ADVERTISEMENT

‘ರಷ್ಯಾ ಗಡಿಗಿಂತ 100 ಕಿ.ಮೀ. ದೂರದಲ್ಲಿರುವ ಮೊರೊಜೊವಾಸ್ಕಿ ಜಿಲ್ಲೆಯನ್ನು ಪ್ರವೇಶಿಸಿದ ಒಟ್ಟು 44 ಡ್ರೋನ್‌ಗಳನ್ನು ಹೊಡೆದುರುಳಿಸಲಾಗಿದೆ. ಜತೆಗೆ, ಕುರ್‌ಸ್ಕ್, ಬೆಲ್‌ಗೊರೊಡ್‌, ಕ್ರಸ್ನೊಡರ್‌ ಮತ್ತು ಸರಟೋವ್‌ ಪ್ರದೇಶಗಳ ಮೇಲೆ 9 ಡ್ರೋನ್‌ಗಳು ದಾಳಿ ಮಾಡಿವೆ’ ಎಂದು ರಷ್ಯಾದ ರಕ್ಷಣಾ ಇಲಾಖೆ ತಿಳಿಸಿದೆ.

ರಷ್ಯಾ – ಉಕ್ರೇನ್‌ ನಡುವಿನ ಸಂಘರ್ಷ ಆರಂಭವಾದಗಿನಿಂದ ನಡೆದ ಅತಿ ದೊಡ್ಡ ವೈಮಾನಿಕ ದಾಳಿ ಇದಾಗಿದ್ದು, ಉಕ್ರೇನ್‌ ಪಡೆಗಳು ರಷ್ಯಾ ನೆಲದ ಮೇಲಿನ ಆಕ್ರಮಣವನ್ನು ಬಿರುಸುಗೊಳಿಸಿವೆ. ಡ್ರೋನ್‌ ದಾಳಿಯಿಂದ ವಿದ್ಯುತ್ ಉಪಕೇಂದ್ರಕ್ಕೆ ಹಾನಿಯಾಗಿದೆ. 

ರಷ್ಯಾದ 6 ಯುದ್ಧವಿಮಾನಗಳ ನಾಶ: ಡ್ರೋನ್‌ ದಾಳಿಯ ಮೂಲಕ ರಷ್ಯಾದ 6 ಯುದ್ಧವಿಮಾನಗಳನ್ನು ನಾಶಪಡಿಸಲಾಗಿದೆ ಮತ್ತು 8 ಯುದ್ಧವಿಮಾನಗಳಿಗೆ ಹಾನಿ ಉಂಟು ಮಾಡಲಾಗಿದೆ ಎಂದು ಉಕ್ರೇನ್‌ ಶುಕ್ರವಾರ ತಿಳಿಸಿದೆ.

ರಷ್ಯಾದ ಬಲವನ್ನು ಕುಗ್ಗಿಸುವ ನಿಟ್ಟಿನಲ್ಲಿ ಉಕ್ರೇನ್‌ ನಡೆಸಿದ ವಿಶೇಷ ಕಾರ್ಯಾಚರಣೆ ಇದಾಗಿದೆ ಎಂದು  ಮೂಲಗಳು ತಿಳಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.