ADVERTISEMENT

ರಷ್ಯಾದ 23 ಡ್ರೋನ್‌ ಹೊಡೆದುರುಳಿಸಿದ ಉಕ್ರೇನ್

ಏಜೆನ್ಸೀಸ್
Published 20 ಫೆಬ್ರುವರಿ 2024, 15:48 IST
Last Updated 20 ಫೆಬ್ರುವರಿ 2024, 15:48 IST
<div class="paragraphs"><p>ಸಾಂದರ್ಭಿಕ ಚಿತ್ರ</p></div>

ಸಾಂದರ್ಭಿಕ ಚಿತ್ರ

   

ಕೀವ್: ಹಾರ್ಕಿವ್‌ ಸೇರಿದಂತೆ ವಿವಿಧ ಪ್ರದೇಶಗಳಲ್ಲಿ ರಷ್ಯಾದ 23 ಡ್ರೋನ್‌ಗಳನ್ನು ಹೊಡೆದುರುಳಿಸಿರುವುದಾಗಿ ಉಕ್ರೇನ್ ವಾಯುಪಡೆ ಮಂಗಳವಾರ ಹೇಳಿದೆ.

‘ನಾವು ನಡೆಸಿದ ಪ್ರತಿದಾಳಿಯಲ್ಲಿ ಇರಾನ್‌ ನಿರ್ಮಿತ ಎಲ್ಲ 23 ಶಾಹೀದ್‌ ಡ್ರೋನ್‌ಗಳನ್ನು ಹೊಡೆದುರುಳಿಸಿದ್ದೇವೆ. ಹಾರ್ಕಿವ್, ಪೊಲ್ತಾವ, ಕಿರೊವೊರಾದ್, ಡಿನಿಪ್ರೊ, ಖೆರ್ಸಾನ್‌ ಮತ್ತು ಮೈಕೊಲೈವ್‌ ಪ್ರದೇಶಗಳನ್ನು ಗುರಿಯಾಗಿಸಿ ಡ್ರೋನ್‌ ದಾಳಿ ನಡೆದಿದೆ’ ಎಂದು ತಿಳಿಸಿದೆ. ಆದರೆ, ರಷ್ಯಾ ಈ ಬಗ್ಗೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. 

ADVERTISEMENT

5 ಸಾವು: ಉಕ್ರೇನ್‌ನ ಈಶಾನ್ಯ ಭಾಗದ ಸುಮಿ ಪ್ರದೇಶದಲ್ಲಿ ರಷ್ಯಾ ನಡೆಸಿದ ದಾಳಿಯಲ್ಲಿ ಐವರು ನಾಗರಿಕರು ಮೃತಪಟ್ಟಿರುವುದಾಗಿ ಉಕ್ರೇನ್‌ ಸೇನೆ ಹೇಳಿದೆ. ರಷ್ಯಾದ ಗಡಿಯಿಂದ 10 ಕಿ.ಮೀ ದೂರದಲ್ಲಿರುವ ನೋವಾ ಸ್ಲೊಬೊಡಾ ಗ್ರಾಮದ ಮೇಲೆ ಈ ದಾಳಿ ನಡೆದಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.