ADVERTISEMENT

ರಷ್ಯಾ ಪಡೆಗಳಿಂದ ಗುಂಡಿನ ದಾಳಿ: ಮಗು ಸೇರಿ 7 ಮಂದಿ ಸಾವು– ಉಕ್ರೇನ್‌

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 13 ಮಾರ್ಚ್ 2022, 1:29 IST
Last Updated 13 ಮಾರ್ಚ್ 2022, 1:29 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಕೀವ್‌ ಸಮೀಪದ ಪೆರೆಮೊಹಾ ಗ್ರಾಮದಿಂದ ಮಹಿಳೆಯರು ಮತ್ತು ಮಕ್ಕಳನ್ನು ಸ್ಥಳಾಂತರಿಸುತ್ತಿದ್ದ ಯೋಧರ ಮೇಲೆ ರಷ್ಯಾ ಪಡೆಗಳು ಗುಂಡು ಹಾರಿಸಿವೆ. ಈ ಘಟನೆಯಲ್ಲಿ ಮಗು ಸೇರಿದಂತೆ ಏಳು ಜನರು ಮೃತಪಟ್ಟಿದ್ದಾರೆ ಎಂದು ಉಕ್ರೇನ್‌ನ ಗುಪ್ತಚರ ಇಲಾಖೆ ಶನಿವಾರ ಆರೋಪಿಸಿದೆ.

ಪೆರೆಮೊಹಾ ಗ್ರಾಮದಿಂದ ‘ಹಸಿರು ಕಾರಿಡಾರ್‌’ ಮೂಲಕ ನಾಗರಿಕರನ್ನು ಸ್ಥಳಾಂತರಿಸುವುದಕ್ಕೆ ರಷ್ಯಾ ಒಪ್ಪಿಕೊಂಡಿತ್ತು. ಕದನ ವಿರಾಮವನ್ನು ಘೋಷಿಸಿದ ಬಳಿಕವೂ ರಷ್ಯಾ ಪಡೆಗಳು ಗುಂಡಿನ ದಾಳಿ ನಡೆಸಿವೆ ಎಂದು ತಿಳಿದುಬಂದಿದೆ.

‘ಇದು ತುಂಬಾ ಅಪಾಯಕಾರಿ ಬೆಳವಣಿಗೆ. ಕಾರಣ, ರಷ್ಯಾ ಪಡೆಗಳು ನಾಗರಿಕರನ್ನು ನಿರ್ದಯವಾಗಿ ಕೊಲ್ಲುತ್ತಿವೆ’ ಎಂದು ಉಕ್ರೇನ್‌ ಕಳವಳ ವ್ಯಕ್ತಪಡಿಸಿದೆ.

ADVERTISEMENT

ಫೆ.24ರಂದು ಉಕ್ರೇನ್‌ ಮೇಲೆ ರಷ್ಯಾ ದಾಳಿ ಆರಂಭಿಸಿದೆ. ರಷ್ಯಾ ಪಡೆಗಳು ನಾಗರಿಕರನ್ನು ಗುರಿಯಾಗಿಸಿ ದಾಳಿ ನಡೆಸುತ್ತಿವೆ ಎಂದು ಉಕ್ರೇನ್‌ ಆರೋಪಿಸುತ್ತಿದೆ. ಆದರೆ, ಈ ಆರೋಪವನ್ನು ಪುಟಿನ್‌ ಸರ್ಕಾರ ತಳ್ಳಿಹಾಕುತ್ತಲೇ ಬಂದಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.