
ವಿಲ್ನಿಯಸ್: ಉಕ್ರೇನ್, ಅಮೆರಿಕ ಮತ್ತು ರಷ್ಯಾ ಪ್ರತಿನಿಧಿಗಳ ನಡುವೆ ಎರಡು ದಿನ ನಡೆದ ಮಾತುಕತೆ ಬಳಿಕ, ಉಕ್ರೇನ್‌ಗಾಗಿ ಅಮೆರಿಕ ಸಿದ್ಧಪಡಿಸಿರುವ ಭದ್ರತಾ ಖಾತರಿ ದಾಖಲೆ ಶೇ 100ರಷ್ಟು ಸಿದ್ಧವಾಗಿದೆ ಎಂದು ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್‌ಸ್ಕಿ ಭಾನುವಾರ ತಿಳಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಪಾಲುದಾರ ರಾಷ್ಟ್ರಗಳು ಒಪ್ಪಂದಕ್ಕೆ ಸಹಿ ಹಾಕುವ ದಿನಾಂಕ ನಿಗದಿ ಮಾಡಲು ಉಕ್ರೇನ್ ಕಾಯುತ್ತಿದೆ. ಬಳಿಕ ದಾಖಲೆಯನ್ನು ಅಮೆರಿಕ ಸಂಸತ್ತು ಮತ್ತು ಉಕ್ರೇನ್ ಸಂಸತ್ತಿನಲ್ಲಿ ಮಂಡಿಸಲಾಗುವುದು’ ಎಂದು ತಿಳಿಸಿದ್ದಾರೆ.
‘ಅಬುಧಾಬಿಯಲ್ಲಿ ನಡೆದ ಮಾತುಕತೆಯಲ್ಲಿ ಮೂರು ದೇಶಗಳ ರಾಜತಾಂತ್ರಿಕ ಅಧಿಕಾರಿಗಳು ಮಾತ್ರವಲ್ಲದೆ ಸೇನಾ ಪ್ರತಿನಿಧಿಗಳು ಸಹ ಭಾಗಿಯಾಗಿದ್ದರು. ರಷ್ಯಾ–ಉಕ್ರೇನ್ ಸಂಘರ್ಷ ಅಂತ್ಯದ ಉದ್ದೇಶದಿಂದ ಶುಕ್ರವಾರ ಆರಂಭವಾದ ಮಾತುಕತೆಯು ಶನಿವಾರ ಮುಕ್ತಾಯವಾಯಿತು’ ಎಂದು ಅವರು ಹೇಳಿದ್ದಾರೆ.
ಮುಂದಿನ ಹಂತದ ಮಾತುಕತೆಗಾಗಿ ನಿಯೋಗವು ಫೆಬ್ರುವರಿ 1ರಂದು ಮತ್ತೆ ಭೇಟಿಯಾಗಲಿದೆ ಎಂದು ಅಮೆರಿಕದ ಅಧಿಕಾರಿಗಳು ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.