ವೊಲೊಡಿಮಿರ್ ಝೆಲೆನ್‌ಸ್ಕಿ
ಕೀವ್ (ಎಪಿ): ‘ಹೊಸದಾಗಿ ಅಭಿವೃದ್ಧಿಪಡಿಸಿರುವ ದೂರಗಾಮಿ ಕ್ಷಿಪಣಿ ಮತ್ತು ಡ್ರೋನ್‌ಗಳ ದಾಳಿಯಿಂದಾಗಿ ರಷ್ಯಾದಲ್ಲಿ ತೀವ್ರ ಅನಿಲ ಕೊರತೆ ಉಂಟಾಗುತ್ತಿದೆ. ಜೊತೆಗೆ, ನಮ್ಮ ದೇಶದ ಡೊನೆಟ್‌ಸ್ಕ್‌ನ ಪೂರ್ವದಲ್ಲಿರುವ ಪ್ರದೇಶವೊಂದನ್ನು ವಶಪಡಿಸಿಕೊಳ್ಳಲು ಬಂದಿದ್ದ ರಷ್ಯಾದ ವಿಮಾನವನ್ನೂ ನಾವು ಹೊಡೆದುರುಳಿಸಿದ್ದೇವೆ’ ಎಂದು ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್‌ಸ್ಕಿ ಹೇಳಿದರು.
‘ನಮ್ಮ ಹೊಸ ಕ್ಷಿಪಣಿ ಹಾಗೂ ಡ್ರೋನ್‌ಗಳು ರಷ್ಯಾಕ್ಕೆ ನಷ್ಟವನ್ನುಂಟು ಮಾಡಿವೆ. ರಷ್ಯಾ ಸೇನಾ ನೆಲೆಗಳ ಮೇಲೆಯೂ ದಾಳಿ ನಡೆಸುತ್ತಿದ್ದೇವೆ. ನಮ್ಮಿಂದ 250 ಕಿ.ಮೀ ದೂರದಲ್ಲಿರುವ ರಷ್ಯಾದ ಸಮುದ್ರದ ತಟದಲ್ಲಿರುವ ತೈಲ ಘಟಕದ ಮೇಲೆಯೂ ನಾವು ದಾಳಿ ನಡೆಸಿದ್ದೇವೆ. ಇದು ನಮಗೆ ದೊರೆತ ಅತಿ ದೊಡ್ಡ ಯಶಸ್ಸು’ ಎಂದು ಸುದ್ದಿಗೋಷ್ಠಿಯಲ್ಲಿ ಅವರು ಮಾಹಿತಿ ನೀಡಿದರು.
‘ನಮಗಿರುವ ಮಾಹಿತಿ ಪ್ರಕಾರ, ನಮ್ಮ ದಾಳಿ ನಂತರ ರಷ್ಯಾದ ಶೇ 20ರಷ್ಟು ತೈಲ ಪೂರೈಕೆಯು ನಷ್ಟವಾಗಿದೆ. ಮುಖ್ಯ ವಿಷಯವೇನೆಂದರೆ ರಷ್ಯಾವು ಚೀನಾ ಮತ್ತು ಬೆಲರೂಸ್‌ನ ಸಿಕ್ಸ್‌ಫೋಲ್ಡ್ ಕಂಪನಿಯಿಂದ ಅನಿಲವನ್ನು ಆಮದು ಮಾಡಿಕೊಳ್ಳುತ್ತಿದೆ. ಇದಕ್ಕಾಗಿ ಆಮದು ಸುಂಕವನ್ನು ತೆಗೆದು ಹಾಕಿದೆ’ ಎಂದೂ ಹೇಳಿದರು.
ಅನಿಲ ಆಮದಿನ ಕುರಿತು ರಷ್ಯಾವು ಪ್ರತಿಕ್ರಿಯಿಸಿಲ್ಲ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.