ADVERTISEMENT

ಆಪ್ತರ ನಿರ್ಗಮನ: ಪ್ರಧಾನಿ ಪಟ್ಟ ಉಳಿಸಿಕೊಳ್ಳಲು ಬೋರಿಸ್‌ ಜಾನ್ಸನ್ ಹರಸಾಹಸ

ಏಜೆನ್ಸೀಸ್
Published 4 ಫೆಬ್ರುವರಿ 2022, 19:31 IST
Last Updated 4 ಫೆಬ್ರುವರಿ 2022, 19:31 IST
ಬ್ರಿಟನ್ ಪ್ರಧಾನಿ ಬೋರಿಸ್ ಜಾನ್ಸನ್
ಬ್ರಿಟನ್ ಪ್ರಧಾನಿ ಬೋರಿಸ್ ಜಾನ್ಸನ್   

ಲಂಡನ್‌: ತಮ್ಮ ಆಪ್ತಬಳಗದಲ್ಲಿನ ಕೆಲವರು ಹೊರನಡೆದ ಕಾರಣ ಬ್ರಿಟನ್‌ ಪ್ರಧಾನಿ ಬೋರಿಸ್‌ ಜಾನ್ಸನ್‌ ಅವರ ಸ್ಥಾನ ಅಲುಗಾಡುತ್ತಿದೆ. ಹೇಗಾದರೂ ಮಾಡಿ ಪ್ರಧಾನಿ ಪಟ್ಟ ಉಳಿಸಿಕೊಳ್ಳಲು ಹೆಣಗಾಡುವ ಪರಿಸ್ಥಿತಿ ನಿರ್ಮಾಣವಾಗಿದೆ.

ಕೋವಿಡ್‌–19 ಹಿನ್ನೆಲೆಯಲ್ಲಿ ಜಾರಿಗೊಳಿಸಿದ್ದ ಲಾಕ್‌ಡೌನ್‌ ನಿರ್ಬಂಧಗಳನ್ನು ಉಲ್ಲಂಘಿಸಿ ಆಡಳಿತಾರೂಢ ಕನ್ಸರ್ವೇಟಿವ್‌ ಪಾರ್ಟಿಯ ಕೆಲ ಮುಖಂಡರು ಹಾಗೂ ಸರ್ಕಾರಿ ನೌಕರರು ಔತಣಕೂಟಗಳಲ್ಲಿ ಪಾಲ್ಗೊಂಡಿದ್ದು ಬ್ರಿಟನ್‌ನಲ್ಲಿ ಭಾರಿ ವಿವಾದ, ಚರ್ಚೆಗೆ ಕಾರಣವಾಗಿದೆ. ಇದು ‘ಪಾರ್ಟಿಗೇಟ್‌’ ಹಗರಣ ಎಂದೇ ಹೆಸರಾಗಿದೆ.

ತೀವ್ರ ಟೀಕೆಗಳು ವ್ಯಕ್ತವಾದ ಕಾರಣ, ತಮ್ಮ ನಿಷ್ಠ ಹಾಗೂ ಮುಖ್ಯ ಸಲಹೆಗಾರ್ತಿ ಮುನಿರಾ ಮಿರ್ಜಾ ಅವರು ಗುರುವಾರ ತಮ್ಮ ಸ್ಥಾನ ತ್ಯಜಿಸಿರುವುದು ಪ್ರಧಾನಿ ಜಾನ್ಸನ್ ಅವರಿಗೆ ಆಘಾತ ತಂದಿದೆ.

ADVERTISEMENT

ಜಾನ್ಸನ್‌ ಅವರ ನಿಷ್ಠರಾದ, ಸಿಬ್ಬಂದಿ ಮುಖ್ಯಸ್ಥ ಡ್ಯಾನ್‌ ರಾಸೆನ್‌ಫೀಲ್ಡ್‌, ಹಿರಿಯ ಅಧಿಕಾರಿ ಮಾರ್ಟಿನ್‌ ರೇನಾಲ್ಡ್ಸ್ ಅವರು ಈಗಾಗಲೇ ತಮ್ಮ ಸ್ಥಾನಗಳನ್ನು ತ್ಯಜಿಸಿದ್ದು, ಇನ್ನೂ ಹಲವರು ಇವರನ್ನು ಹಿಂಬಾಲಿಸುವ ಸಾಧ್ಯತೆಗಳಿವೆ ಎಂದು ಬ್ರಿಟನ್‌ ಮಾಧ್ಯಮಗಳು ವರದಿ ಮಾಡಿವೆ.

‘ಪಾರ್ಟಿಗೇಟ್’ ಭಾರಿ ಸದ್ದು ಮಾಡಿದ ಸಂದರ್ಭದಲ್ಲಿ, ಹಣಕಾಸು ಸಚಿವ ರಿಷಿ ಸುನಕ್‌ ಅವರು ಸಹ ಜಾನ್ಸನ್‌ ಅವರನ್ನು ಸಮರ್ಥಿಸುವ ಗೊಡವೆ ಹೋಗಲಿಲ್ಲ. ಈ ಎಲ್ಲ ಬೆಳವಣಿಗೆಗಳು ಅವರ ಜಾನ್ಸನ್‌ ಅವರ ಸ್ಥಾನಕ್ಕೆ ಸಂಚಕಾರ ಬಂದೊದಗಿದೆ ಎಂಬುದನ್ನು ಸೂಚಿಸುತ್ತವೆ ಎಂದೂ ಮಾಧ್ಯಮಗಳು ವರದಿ ಮಾಡಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.