
ವಿಶ್ವಸಂಸ್ಥೆ: ಕೃತಕ ಬುದ್ಧಿಮತ್ತೆಗೆ (ಎಐ) ಸಂಬಂಧಿಸಿ ವಿಶ್ವಸಂಸ್ಥೆ ರಚಿಸಿರುವ ಸಮಿತಿಯಲ್ಲಿ ಐಐಟಿ– ಮದ್ರಾಸ್ ಪ್ರಾಧ್ಯಾಪಕ ಬಲರಾಮನ್ ರವೀಂದ್ರನ್ ಕಾರ್ಯನಿರ್ವಹಿಸಲಿದ್ದಾರೆ.
ವಿವಿಧ ದೇಶಗಳ 40 ತಜ್ಞರನ್ನು ಒಳಗೊಂಡ ಈ ಸಮಿತಿಗೆ ಬಲರಾಮನ್ ಅವರ ಹೆಸರನ್ನು ವಿಶ್ವಸಂಸ್ಥೆಯ ಮಹಾಪ್ರಧಾನ ಕಾರ್ಯದರ್ಶಿ ಆಂಟೊನಿಯೊ ಗುಟೆರಸ್ ಶಿಫಾರಸು ಮಾಡಿದ್ದಾರೆ.
ಬೆಂಗಳೂರಿನ ಭಾರತೀಯ ವಿಜ್ಞಾನ ಸಂಸ್ಥೆಯಿಂದ(ಐಐಎಸ್‌ಸಿ) ಸ್ನಾತಕೋತ್ತರ ಪದವಿ ಪಡೆದಿರುವ ಬಲರಾಮನ್ ರವೀಂದ್ರನ್, ಯೂನಿವರ್ಸಿಟಿ ಆಫ್ ಮೆಸಾಚುಸೆಟ್ಸ್‌ನಲ್ಲಿ ಪಿ.ಎಚ್‌ಡಿ ಪದವಿ ಪೂರೈಸಿದ್ದಾರೆ.
‘3 ವರ್ಷಗಳ ಅವಧಿಗೆ ಸೇವೆ ಸಲ್ಲಿಸಲು ತಜ್ಞರ ಹೆಸರನ್ನು ಶಿಫಾರಸು ಮಾಡಲಾಗಿದ್ದು, ವಿಶ್ವಸಂಸ್ಥೆಯ ಸಾಮಾನ್ಯ ಸಭೆಯು ಇದನ್ನು ಅಂಗೀಕರಿಸಬೇಕಿದೆ’ ಎಂದು ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಗುಟೆರಸ್ ತಿಳಿಸಿದ್ದಾರೆ.
ಐಐಟಿ ಮದ್ರಾಸ್‌ನ ಸೆಂಟರ್ ಫಾರ್ ರೆಸ್ಪಾನ್ಸಿಬಲ್ ಎ.ಐ (ಸಿಇಆರ್‌ಎಐ) ಮುಖ್ಯಸ್ಥರಾಗಿ ಬಲರಾಮನ್ ಸೇವೆ ಸಲ್ಲಿಸುತ್ತಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.