ADVERTISEMENT

ವಿಶ್ವಸಂಸ್ಥೆಯ ಚೀನಾದ ಸ್ಥಾನಿಕ ಸಂಯೋಜಕರಾಗಿ ಸಿದ್ಧಾರ್ಥ್‌ ಚಟರ್ಜಿ ನೇಮಕ

ಪಿಟಿಐ
Published 16 ಡಿಸೆಂಬರ್ 2020, 6:24 IST
Last Updated 16 ಡಿಸೆಂಬರ್ 2020, 6:24 IST
ವಿಶ್ವಸಂಸ್ಥೆ
ವಿಶ್ವಸಂಸ್ಥೆ   

ವಿಶ್ವಸಂಸ್ಥೆ: ವಿಶ್ವಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಅಂಟೊನಿಯೊ ಗುಟೆರೆಸ್‌ ಅವರು ವಿಶ್ವಸಂಸ್ಥೆಯ ಹಿರಿಯ ಅಧಿಕಾರಿಯಾಗಿ ಕಾರ್ಯನಿರ್ವಹಿಸುತ್ತಿರುವ ಭಾರತದ ಸಿದ್ಧಾರ್ಥ್‌ ಚಟರ್ಜಿ ಅವರನ್ನು ವಿಶ್ವಸಂಸ್ಥೆಯ ಚೀನಾದ ಸ್ಥಾನಿಕ ಸಂಯೋಜಕರಾಗಿ ನೇಮಿಸಿದ್ದಾರೆ.

ಸ್ಥಾನಿಕ ಸಂಯೋಜಕರು, ಆ ದೇಶದ ಅಭಿವೃದ್ಧಿ ಕಾರ್ಯದಲ್ಲಿ ವಿಶ್ವಸಂಸ್ಥೆಯ ಪ್ರಧಾನ ಕಾರ್ಯದರ್ಶಿಯ ಪ್ರತಿನಿಧಿಯಾಗಿ ಕಾರ್ಯನಿರ್ವಹಿಸಲಿದ್ದಾರೆ. ವಿಶ್ವಸಂಸ್ಥೆಯ ಸ್ಥಾನಿಕ ಸಂಯೋಜಕರ ನೇತೃತ್ವದ ತಂಡವು ದೇಶಗಳಲ್ಲಿ ಸುಸ್ಥಿರ ಅಭಿವೃದ್ಧಿ (ಎಸ್‌ಡಿಜಿ) ಸಾಧಿಸುವ ಮೂಲಕ ಕೋವಿಡ್‌–19 ಪಿಡುಗಿನ ವಿರುದ್ಧ ಹೋರಾಡಲು ಸಹಕರಿಸುತ್ತದೆ.

ಅಂಟೊನಿಯೊ ಗುಟೆರೆಸ್‌ ಅವರು ಸರ್ಕಾರದ ಅನುಮತಿಯೊಂದಿಗೆ ಸಿದ್ಧಾರ್ಥ್‌ ಚಟರ್ಜಿ ಅವರನ್ನು ವಿಶ್ವಸಂಸ್ಥೆಯ ಚೀನಾದ ಸ್ಥಾನಿಕ ಸಂಯೋಜಕರಾಗಿ ನೇಮಿಸಿದ್ದಾರೆ. ಜನವರಿಯ ಎರಡು ಅಥವಾ ಮೂರನೇ ವಾರದಲ್ಲಿ ಸಿದ್ಧಾರ್ಥ್‌ ಅವರು ಅಧಿಕಾರ ಸ್ವೀಕರಿಸಲಿದ್ದಾರೆ ಎಂದು ಪ್ರಧಾನ ಕಾರ್ಯದರ್ಶಿಯ ವಕ್ತಾರರು ತಿಳಿಸಿದ್ದಾರೆ.

ADVERTISEMENT

ಅಂತರರಾಷ್ಟ್ರೀಯ ಸಹಕಾರ, ಸುಸ್ಥಿರ ಅಭಿವೃದ್ಧಿ, ಮಾನವೀಯ ಸಮನ್ವಯ, ಶಾಂತಿ ಮತ್ತು ಸುರಕ್ಷತೆ ಕ್ಷೇತ್ರಗಳಲ್ಲಿಚಟರ್ಜಿ ಅವರಿಗೆ 25 ವರ್ಷಗಳ ಅನುಭವವಿದೆ ಎಂದು ವಿಶ್ವಸಂಸ್ಥೆ ಹೇಳಿಕೆ ಬಿಡುಗಡೆ ಮಾಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.