ADVERTISEMENT

ಪರಮಾಣು ಘಟಕದ ಬಳಿ ಸಂಘರ್ಷ ನಿಲ್ಲಿಸಿ: ವಿಶ್ವಸಂಸ್ಥೆ

ಏಜೆನ್ಸೀಸ್
Published 12 ಆಗಸ್ಟ್ 2022, 11:20 IST
Last Updated 12 ಆಗಸ್ಟ್ 2022, 11:20 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ವಿಶ್ವಸಂಸ್ಥೆ: ಆಗ್ನೇಯ ಉಕ್ರೇನಿನಲ್ಲಿರುವ ಯುರೋಪಿನ ಅತಿದೊಡ್ಡ ಪರಮಾಣು ವಿದ್ಯುತ್‌ ಸ್ಥಾವರಝಪೋರಿಝ್ಯಾ ಸಮೀಪವೇ ರಷ್ಯಾ ಮತ್ತು ಉಕ್ರೇನ್‌ ದೇಶಗಳು ಸೇನಾ ಚಟುವಟಿಕೆ ನಡೆಸುತ್ತಿರುವುದನ್ನು ವಿಶ್ವಸಂಸ್ಥೆ ಖಂಡಿಸಿದ್ದು, ಈ ಬಗ್ಗೆ ಎಚ್ಚರಿಸಿಕೆ ನೀಡಿದೆ.

ಇದು ಇಡೀ ಪ್ರದೇಶಕ್ಕೆ ಅಪಾಯಕಾರಿಯಾಗಿದ್ದು, ಕೂಡಲೇ ರಷ್ಯಾ ಮತ್ತು ಉಕ್ರೇನ್‌ ಇಲ್ಲಿ ಸಂಘರ್ಷವನ್ನು ನಿಲ್ಲಿಸಬೇಕು ಎಂದು ಕರೆ ನೀಡಿದೆ.

ಅಂತರರಾಷ್ಟ್ರೀಯ ಪರಮಾಣು ಶಕ್ತಿ ಸಂಸ್ಥೆ (ಐಎಇಎ) ಮುಖ್ಯಸ್ಥ ರಫೇಲ್ ಗ್ರೊಸ್ಸಿ,ಝಪೋರಿಝ್ಯಾ ಘಟಕದಲ್ಲಾಗಿರುವ ಹಾನಿಯ ಬಗ್ಗೆಪರಮಾಣು ತಜ್ಞರು ಪರಿಶೀಲನೆ ನಡೆಸಲು ಅವಕಾಶ ನೀಡಬೇಕೆಂದು ಉಭಯ ದೇಶಗಳಲ್ಲಿ ಮನವಿ ಮಾಡಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.