ADVERTISEMENT

ಸೈಬರ್‌ ದಾಳಿ ಮೂಲಕ ಉತ್ತರ ಕೊರಿಯಾ ಭಾರಿ ಹಣ ಗಳಿಕೆ

​ಪ್ರಜಾವಾಣಿ ವಾರ್ತೆ
Published 7 ಫೆಬ್ರುವರಿ 2022, 14:02 IST
Last Updated 7 ಫೆಬ್ರುವರಿ 2022, 14:02 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ವಿಶ್ವಸಂಸ್ಥೆ(ಎಪಿ): ಉತ್ತರ ಕೊರಿಯಾ ತನ್ನ ನ್ಯೂಕ್ಲಿಯರ್‌ ಮತ್ತು ಕ್ಷಿಪಣಿಗಳ ಬಲವರ್ಧನೆಗಾಗಿ ಅಕ್ರಮವಾಗಿ ಹಣ ಹೊಂದಿಸಲು ಹಣಕಾಸು ಸಂಸ್ಥೆಗಳು, ಕ್ರಿಪ್ಟೋಕರೆನ್ಸಿ ಸಂಸ್ಥೆ ಮತ್ತು ವಿನಿಮಯ ಕೇಂದ್ರಗಳ ಮೇಲೆ ಸೈಬರ್‌ ದಾಳಿ ನಡೆಸುವುದನ್ನು ಮುಂದುವರೆಸಿದ್ದು, ಕೋಟ್ಯಂತರಡಾಲರ್‌ಗಳನ್ನು ಕಳ್ಳತನ ಮಾಡುತ್ತಿದೆ ಎಂದು ವಿಶ್ವಸಂಸ್ಥೆ ಹೇಳಿದೆ.

’ಉತ್ತರ ಕೊರಿಯಾದ ಹೆಸರು ಹೇಳಲು ಇಚ್ಛಿಸದ ಮೂಲಗಳ ಪ್ರಕಾರ ಸೈಬರ್‌ ಹ್ಯಾಕರ್‌ಗಳು 2020ರಿಂದ 2021ರ ಮಧ್ಯಭಾಗದವರೆಗೆ ಉತ್ತರ ಅಮೆರಿಕ, ಯೂರೋಪ್‌ ಮತ್ತು ಏಷ್ಯಾದ ಮೂರು ಕ್ರಿಪ್ಟೋಕರೆನ್ಸಿ ವಿನಿಮಯ ಸಂಸ್ಥೆಗಳ ಮೇಲೆ ದಾಳಿ ಮಾಡಿ 50 ದಶಲಕ್ಷ ಡಾಲರ್‌ ಕಳ್ಳತನ ಮಾಡಿದ್ದಾರೆ. ಈ ಸೈಬರ್‌ ಅಪರಾಧವು ವಿವಿಧ ಸ್ಥಳಗಳಿಂದ ನಡೆದಿದೆ‘ ಎಂದು ವಿಶ್ವಸಂಸ್ಥೆಯ ತಜ್ಞರ ಸಮಿತಿ ತಿಳಿಸಿದೆ.

ಸೈಬರ್‌ ದಾಳಿ ಮೂಲಕ ಡಿಜಿಟಲ್‌ ಆರ್ಥಿಕ ಸಂಪನ್ಮೂಲ ಮತ್ತು ಹಲವು ತಂತ್ರಜ್ಞಾನಗಳಿಗೆ ಕನ್ನ ಹಾಕುವ ಉತ್ತರ ಕೊರಿಯಾದ ಸೈಬರ್‌ ದಾಳಿಕೋರರು 2021ರಲ್ಲಿ ಏಳು ಕ್ರಿಪ್ಟೋಕರೆನ್ಸಿ ವಿನಿಮಯ ಮತ್ತು ಹೂಡಿಕೆ ಸಂಸ್ಥೆಗಳ ಮೇಲೆ ದಾಳಿ ನಡೆಸಿ, 400 ದಶಲಕ್ಷ ಡಾಲರ್‌ ಮೌಲ್ಯದ ಕ್ರಿಪ್ಟೋಕರೆನ್ಸಿಯನ್ನು ಕಳ್ಳತನ ಮಾಡಿದ್ದಾರೆ ಎಂದು ಸೈಬರ್‌‌ ಸೆಕ್ಯೂರಿಟಿ ಸಂಸ್ಥೆ ವರದಿ ಮಾಡಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.