ADVERTISEMENT

‘ಮಹಿಳೆಯರ ಹಕ್ಕುಗಳ ಮರುಸ್ಥಾಪನೆ: ತಾಲಿಬಾನ್‌ನಲ್ಲಿ ಮೂಡದ ಒಮ್ಮತ’

ವಿಶ್ವಸಂಸ್ಥೆಯ ನಿಯೋಗ ಭೇಟಿ ನೀಡಿದ ವೇಳೆ ಬಹಿರಂಗಗೊಂಡ ಭಿನ್ನಮತ

ಏಜೆನ್ಸೀಸ್
Published 21 ಜನವರಿ 2023, 13:48 IST
Last Updated 21 ಜನವರಿ 2023, 13:48 IST
ವಿಶ್ವಸಂಸ್ಥೆ 
ವಿಶ್ವಸಂಸ್ಥೆ    

ವಿಶ್ವಸಂಸ್ಥೆ: ಮಹಿಳೆಯರ ಹಕ್ಕುಗಳನ್ನು ಮರುಸ್ಥಾಪಿಸುವ ವಿಚಾರದಲ್ಲಿ ತಾಲಿಬಾನ್‌ನ ಕೆಲ ಅಧಿಕಾರಿಗಳು ಮುಕ್ತರಾಗಿದ್ದರೆ, ಮತ್ತೆ ಕೆಲವರು ಸ್ಪಷ್ಟವಾಗಿ ವಿರೋಧ ವ್ಯಕ್ತಪಡಿಸಿದ್ದಾರೆ ಎಂದು ವಿಶ್ವಸಂಸ್ಥೆಯ ಉಪ ಮಹಾ ಕಾರ್ಯದರ್ಶಿ ಅಮೀನಾ ಮೊಹಮ್ಮದ್ ಅವರ ನೇತೃತ್ವದ ನಿಯೋಗವು ಹೇಳಿದೆ.

ಅಫ್ಗಾನಿಸ್ತಾನಕ್ಕೆ ನಾಲ್ಕು ದಿನಗಳ ಕಾಲ ಪ್ರವಾಸ ಕೈಗೊಂಡಿದ್ದ ವಿಶ್ವಸಂಸ್ಥೆಯ ಉನ್ನತ ನಿಯೋಗವು, ಮಹಿಳಾ ಹಕ್ಕುಗಳನ್ನು ಮರುಸ್ಥಾಪಿಸುವ ಕುರಿತು ತಾಲಿಬಾನ್‌ ಅಧಿಕಾರಿಗಳೊಂದಿಗೆ ಚರ್ಚಿಸಿತ್ತು.

ಅಫ್ಗಾನಿಸ್ತಾನದ ರಾಜಧಾನಿ ಕಾಬೂಲ್ ಹಾಗೂ ಕಂದಹಾರ್‌ನ ದಕ್ಷಿಣ ಭಾಗದಲ್ಲಿ ಕೆಲವು ತಾಲಿಬಾನ್ ಅಧಿಕಾರಿಗಳನ್ನು ನಿಯೋಗವು ಭೇಟಿ ಮಾಡಿತ್ತು. ಆದರೆ, ಯಾವುದೇ ಅಧಿಕಾರಿಗಳ ಹೆಸರನ್ನು ಬಹಿರಂಗಪಡಿಸಿಲ್ಲ.

ADVERTISEMENT

ನ್ಯಾಟೊ ಪಡೆಗಳು ಹಾಗೂ ಅಮೆರಿಕ ಅಫ್ಗಾನಿಸ್ತಾನದಲ್ಲಿನ ತನ್ನ ಯೋಧರನ್ನು 2021ರ ಆಗಸ್ಟ್‌ನಲ್ಲಿ ಹಿಂದಕ್ಕೆ ಕರೆಸಿಕೊಂಡವು. ನಂತರ, ತಾಲಿಬಾನಿಗಳು ಆಡಳಿತ ಚುಕ್ಕಾಣಿ ಹಿಡಿದರು. ಆಗಿನಿಂದ ಅಲ್ಲಿನ ಮಹಿಳೆಯರ ಮೇಲೆ ಕೆಲವು ನಿರ್ಬಂಧಗಳನ್ನು ವಿಧಿಸಲಾಗಿದೆ. ಈ ವಿಷಯವನ್ನು ಕೇಂದ್ರೀಕರಿಸಿ ನಿಯೋಗವು ಸಭೆಗಳನ್ನು ನಡೆಸಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.