ADVERTISEMENT

ವಿಶ್ವ ಸಂತೋಷದ ಸೂಚ್ಯಂಕ; ಭಾರತಕ್ಕೆ ಎಷ್ಟನೇ ಸ್ಥಾನ?

ಪಿಟಿಐ
Published 20 ಮಾರ್ಚ್ 2021, 2:21 IST
Last Updated 20 ಮಾರ್ಚ್ 2021, 2:21 IST
ಸಾಂದರ್ಭಿಕ ಚಿತ್ರ (ಚಿತ್ರ ಕೃಪೆ: ಐಸ್ಟೋಕ್)
ಸಾಂದರ್ಭಿಕ ಚಿತ್ರ (ಚಿತ್ರ ಕೃಪೆ: ಐಸ್ಟೋಕ್)   

ನವದೆಹಲಿ: ವಿಶ್ವಸಂಸ್ಥೆ ಬಿಡುಗಡೆ ಮಾಡಿರುವ ವಿಶ್ವ ಸಂತೋಷದ ವರದಿ 2021ರ ಪಟ್ಟಿಯಲ್ಲಿ 149 ದೇಶಗಳ ಪೈಕಿ ಭಾರತ 139ನೇ ಸ್ಥಾನದಲ್ಲಿದೆ. ಫಿನ್ಲೆಂಡ್ ಸತತವಾಗಿ ನಾಲ್ಕನೇ ವರ್ಷವೂ ಮೊದಲ ಸ್ಥಾನದಲ್ಲಿದೆ.

ವಿಶ್ವಸಂಸ್ಥೆಯ ಸುಸ್ಥಿರ ಅಭಿವೃದ್ಧಿ ಪರಿಹಾರ ಜಾಲವು ವಿಶ್ವ ಸಂತೋಷದ ವರದಿ 2021ರ ಪಟ್ಟಿಯನ್ನು ಬಿಡುಗಡೆ ಮಾಡಿದ್ದು, ಕೋವಿಡ್-19 ಪರಿಣಾಮಗಳು ಜಗತ್ತಿನಾದ್ಯಂತ ಜನರ ಮೇಲೆ ಹೇಗೆ ಪರಿಣಾಮ ಬೀರಿದೆ ಎಂಬುದನ್ನು ಕೇಂದ್ರಿಕರಿಸಿದೆ.

ಪ್ರತಿ ದೇಶದ ನಾಗರಿಕರು ಎಷ್ಟು ಸಂತೋಷದಿಂದ ಇರುತ್ತಾರೆ ಎಂಬುದು ವರದಿಯು ತಿಳಿಸುತ್ತದೆ. ಭಾರತವು 139ನೇ ಸ್ಥಾನದಲ್ಲಿದ್ದು, 2019ರಲ್ಲಿ 140ನೇ ಸ್ಥಾನದಲ್ಲಿತ್ತು.

ADVERTISEMENT

ಈ ಪಟ್ಟಿಯನ್ನು ಫಿನ್ಲೆಂಡ್ ಮುನ್ನಡೆಸುತ್ತಿದ್ದು, ಜಗತ್ತಿನ ಅತ್ಯಂತ ಸಂತೋಷದಾಯಕ ದೇಶವಾಗಿ ಹೊರಹೊಮ್ಮಿದೆ. ಐಲ್ಯಾಂಡ್, ಡೆನ್ಮಾರ್ಕ್, ಸ್ವಿಜರ್ಲೆಂಡ್, ಹಾಲೆಂಡ್, ಸ್ವೀಡನ್, ಜರ್ಮನಿ ಮತ್ತು ನಾರ್ವೆ ನಂತರದ ಸ್ಥಾನದಲ್ಲಿವೆ.

ನೆರೆಯ ಪಾಕಿಸ್ತಾನ 105, ಬಾಂಗ್ಲಾದೇಶ 101 ಮತ್ತು ಚೀನಾ 84ನೇ ಸ್ಥಾನದಲ್ಲಿವೆ. ವಿಶ್ವದ ಅತಿ ಶ್ರೀಮಂತ ರಾಷ್ಟ್ರವಾಗಿರುವ ಹೊರತಾಗಿಯೂ ಸಂತೋಷದ ವಿಚಾರಕ್ಕೆ ಬಂದಾಗ ಅಮೆರಿಕ 19ನೇ ಸ್ಥಾನ ಪಡೆದಿದೆ.

ಅಫ್ಘಾನಿಸ್ತಾನವು ಅತ್ಯಂತ ಅತೃಪ್ತಿಕರ ರಾಷ್ಟ್ರವಾಗಿ ಗುರುತಿಸಿಕೊಂಡಿದ್ದು, ಕೊನೆಯ ಸ್ಥಾನದಲ್ಲಿದೆ. ಜಿಂಬಾಬ್ವೆ 148ನೇ ಸ್ಥಾನದಲ್ಲಿದೆ.

ಗ್ಯಾಲಪ್ ವರ್ಲ್ಡ್ ಸಮೀಕ್ಷೆ, ಜಿಡಿಪಿ, ಸಾಮಾಜಿಕ ಭದ್ರತೆ, ಜೀವನ ಗುಣಮಟ್ಟ, ಆದಾಯ ಸೇರಿದಂತೆ ಹಲವಾರು ಅಂಶಗಳ ಆಧಾರದಲ್ಲಿ ವಿಶ್ವ ಸಂತೋಷದ ಪಟ್ಟಿಯನ್ನು ತಯಾರಿಸಲಾಗುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.