ADVERTISEMENT

ಸಮುದ್ರದಾಳಕ್ಕೆ ಧುಮುಕಿ ವಿವಾಹ ನಿವೇದನೆ:  ಜೀವ ಕಳೆದುಕೊಂಡ ಯುವಕ

​ಪ್ರಜಾವಾಣಿ ವಾರ್ತೆ
Published 23 ಸೆಪ್ಟೆಂಬರ್ 2019, 6:55 IST
Last Updated 23 ಸೆಪ್ಟೆಂಬರ್ 2019, 6:55 IST
   

ತಾಂಜೇನಿಯಾ: ಇಲ್ಲಿನ ಪೆಂಬಾ ದ್ವೀಪದ ಮಾಂಟಾ ರೆಸಾರ್ಟ್‌ನಲ್ಲಿ ಪ್ರೇಯಸಿ ಜತೆ ರಜಾಕಾಲ ಕಳೆಯಲು ಹೋಗಿದ್ದ ಸ್ಟೀವನ್ ವೆಬರ್ ಎಂಬ ವ್ಯಕ್ತಿಸಮುದ್ರದಾಳಕ್ಕೆ ಧುಮುಕಿ ವಿವಾಹ ನಿವೇದನೆ ಮಾಡುವ ಹೊತ್ತಲ್ಲಿ ಜೀವ ಕಳೆದುಕೊಂಡ ಘಟನೆ ನಡೆದಿದೆ.

ಅಮೆರಿದ ವೆಬರ್ ಪ್ರೇಯಸಿ ಕೆನೇಶಾ ಆಂಟೋನಿ ಜತೆ ಪೂರ್ವ ಆಫ್ರಿಕಾದ ಸಮುದ್ರದಲ್ಲಿ ಅರ್ಧ ಮುಳುಗಿರುವ ಸುಸಜ್ಜಿತ ಕೊಠಡಿಯಲ್ಲಿ ರಜಾ ಕಾಲ ಕಳೆದಿದ್ದರು.
2019 ಸೆಪ್ಟೆಂಬರ್ 19ರಂದು ವೆಬರ್ ಸಮುದ್ರಕ್ಕೆ ಧುಮುಕಿ ವಿವಾಹ ನಿವೇದನೆ ಪತ್ರವನ್ನು ಬೆಡ್‌ರೂಂನ ಕಿಟಕಿಯಲ್ಲಿ ಕೆನೇಶಾಗೆ ತೋರಿಸಿದ್ದಾರೆ. ಪ್ರಿಯಕರ ವಿವಾಹ ನಿವೇದನೆ ಮಾಡುತ್ತಿರುವ ದೃಶ್ಯವನ್ನು ಕೆನೇಶಾ ಚಿತ್ರೀಕರಿಸಿದ್ದಾರೆ.

ಇದಾದ ನಂತರ ವೆಬರ್ ನೀರಲ್ಲಿ ಮುಳುಗಿ ಮೃತಪಟ್ಟಿದ್ದಾನೆ ಎಂದು ಕೆನೇಶಾ ತಮ್ಮ ಫೇಸ್‌ಬುಕ್ ಪೋಸ್ಟ್‌ನಲ್ಲಿ ಬರೆದುಕೊಂಡಿದ್ದಾರೆ.

ನನ್ನನ್ನು ಮದುವೆಯಾಗುತ್ತೀಯಾ? ಎಂದು ಕೇಳಿದಾಗ ನಾನು ಹೌದು, ನಿನ್ನನ್ನು ಸಾವಿರ ಬಾರಿ ಮದುವೆಯಾಗುತ್ತೇನೆ ಎಂದು ನಾನು ಹೇಳಿದ್ದರೂ ಅದನ್ನು ಕೇಳಲು ವೆಬರ್ ಇರಲಿಲ್ಲ ಎಂದು ಫೇಸ್‍ಬುಕ್ ಪೋಸ್ಟಿನಲ್ಲಿ ಬರೆದಿರುವ ಕೆನೇಶಾ, ವಿವಾಹ ನಿವೇದನೆಯ ವಿಡಿಯೊವನ್ನು ಶೇರ್ ಮಾಡಿದ್ದಾರೆ.

ADVERTISEMENT

ಮಾಂಟಾ ರೆಸಾರ್ಟ್‌ನಲ್ಲಿ 2019 ಸೆಪ್ಟೆಂಬರ್ 19 ರಂದು ನಡೆದ ದುರ್ಘಟನೆಗೆ ವಿಷಾದಿಸುತ್ತೇವೆ ಎಂದು ರೆಸಾರ್ಟ್ ಪ್ರಕಟಣೆಯಲ್ಲಿ ಹೇಳಿದೆ.
ವೆಬರ್ ಮತ್ತು ಕೆನೇಶಾ ನಾಲ್ಕು ರಾತ್ರಿಗಳನ್ನು ಕಳೆಯಲು ಈ ಕೊಠಡಿ ಕಾಯ್ದಿರಿಸಿದ್ದರು. ಈ ಕೊಠಡಿ ಸಮುದ್ರ ತೀರದಿಂದ 250 ಮೀ ದೂರದಲ್ಲಿ ಸಮುದ್ರಕ್ಕೆ ತಾಗಿ ಕೊಂಡಿದೆ.ವೆಬರ್ 30 ಮೀಟರ್ ಆಳಕ್ಕೆ ಧುಮುಕಿ ಪ್ರೇಯಸಿ ಕೆನೆಶಾ ಆಂಟೊನಿಗೆ ವಿವಾಹ ನಿವೇದನೆ ಮಾಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.