ADVERTISEMENT

UN Human Rights Council: ಯುಎನ್‌ಎಚ್‌ಆರ್‌ಸಿಗೆ ಭಾರತ 7ನೇ ಬಾರಿಗೆ ಆಯ್ಕೆ

ಪಿಟಿಐ
Published 15 ಅಕ್ಟೋಬರ್ 2025, 13:29 IST
Last Updated 15 ಅಕ್ಟೋಬರ್ 2025, 13:29 IST
   

ನ್ಯೂಯಾರ್ಕ್: ವಿಶ್ವಸಂಸ್ಥೆಯ ಮಾನವ ಹಕ್ಕುಗಳ ಮಂಡಳಿಗೆ (ಯುಎನ್‌ಎಚ್‌ಆರ್‌ಸಿ) ಏಳನೇ ಬಾರಿಗೆ, 2026–28ರ ಅವಧಿಗೆ ಭಾರತ ಆಯ್ಕೆಯಾಗಿದೆ.

ಮಂಗಳವಾರ ನಡೆದ ಚುನಾವಣೆಯ ಫಲಿತಾಂಶಗಳನ್ನು ಸಾಮಾಜಿಕ ಮಾಧ್ಯಮದ ಮೂಲಕ ಪ್ರಕಟಿಸಿರುವ ಯುಎನ್‌ಎಚ್‌ಆರ್‌ಸಿ, 2026ರ ಜನವರಿಯಿಂದ ಪ್ರಾರಂಭವಾಗುವ ಮೂರು ವರ್ಷಗಳ ಅವಧಿಗೆ ಭಾರತ ಆಯ್ಕೆಯಾಗಿದೆ ಎಂದು ತಿಳಿಸಿದೆ. 

ಭಾರತಕ್ಕೆ ತಮ್ಮ ಅಭೂತಪೂರ್ವ ಬೆಂಬಲ ನೀಡಿದ ಎಲ್ಲಾ ನಿಯೋಗಗಳಿಗೆ ವಿಶ್ವಸಂಸ್ಥೆಯಲ್ಲಿನ ಭಾರತದ ಕಾಯಂ ಪ್ರತಿನಿಧಿ ಪರ್ವತನೇನಿ ಹರೀಶ್ ಅವರು ಸಾಮಾಜಿಕ ಮಾಧ್ಯಮದಲ್ಲಿ ಧನ್ಯವಾದ ಹೇಳಿದ್ದಾರೆ.

ADVERTISEMENT

‘ಈ ಚುನಾವಣೆಯು ಮಾನವ ಹಕ್ಕುಗಳು ಮತ್ತು ಮೂಲಭೂತ ಸ್ವಾತಂತ್ರ್ಯದ ವಿಷಯದಲ್ಲಿ ಭಾರತದ ಅಚಲವಾದ ಬದ್ಧತೆಯನ್ನು ಪ್ರತಿಬಿಂಬಿಸುತ್ತದೆ. ನಮ್ಮ ಅಧಿಕಾರಾವಧಿಯಲ್ಲಿ ಈ ಉದ್ದೇಶಗಳಿಗೆ ರಚನಾತ್ಮಕವಾಗಿ ಕೆಲಸ ಮಾಡಲು ಉತ್ಸುಕರಾಗಿದ್ದೇವೆ ’ ಎಂದು ಅವರು ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.