ADVERTISEMENT

ಬ್ರಿಟನ್‌: ಉಪಚುನಾವಣೆಗಳಲ್ಲಿ ಪ್ರಧಾನಿ ರಿಷಿ ಸುನಕ್‌ ಪಕ್ಷಕ್ಕೆ ಹಿನ್ನಡೆ

ಪಿಟಿಐ
Published 20 ಅಕ್ಟೋಬರ್ 2023, 14:48 IST
Last Updated 20 ಅಕ್ಟೋಬರ್ 2023, 14:48 IST
<div class="paragraphs"><p>ರಿಷಿ ಸುನಕ್‌</p></div>

ರಿಷಿ ಸುನಕ್‌

   

ಲಂಡನ್‌: ಬ್ರಿಟನ್‌ ಪ್ರಧಾನಿ ರಿಷಿ ಸುನಕ್‌ ಅವರ ಆಡಳಿತಾರೂಢ ಕನ್ಸರ್‌ವೇಟಿವ್‌ ಪಕ್ಷವು, ವಿರೋಧ ಪಕ್ಷ ಲೇಬರ್ ಪಾರ್ಟಿ ಎದುರು ಶುಕ್ರವಾರ ಎರಡು ಉಪಚುನಾವಣೆಗಳಲ್ಲಿ ಭಾರಿ ಸೋಲು ಅನುಭವಿಸಿದೆ.

ಕನ್ಸರ್ವೇಟಿವ್‌ ಪಕ್ಷದ ಭದ್ರಕೋಟೆಯಾದ ಇಂಗ್ಲೆಂಡ್‌ನ ಮಿಡ್ ಬೆಡ್‌ಫೋರ್ಡ್‌ಶೈರ್ ಮತ್ತು ಟ್ಯಾಮ್‌ವರ್ತ್ ಕ್ಷೇತ್ರಗಳಲ್ಲಿ ಗೆಲ್ಲುವ ಮೂಲಕ ಲೇಬರ್‌ ಪಕ್ಷ ಇತಿಹಾಸ ನಿರ್ಮಿಸಿದೆ.

ADVERTISEMENT

ಲೇಬರ್‌ ಪಕ್ಷದ ನಾಯಕ ಕೀರ್ ಸ್ಟಾರ್ಮರ್ ತಮ್ಮ ಪಕ್ಷವು ‘ರಾಜಕಾರಣದ ದಿಕ್ಕನ್ನು ಬದಲಿಸಲಿದೆ. ಜನರು ಬದಲಾವಣೆ ಬಯಸಿದ್ದಾರೆ’ ಎಂದರು. 

‘ಫಲಿತಾಂಶಗಳು ನಿರಾಶೆ ಮೂಡಿಸಿವೆ. ಟೋರಿ ಮತದಾರರು ಮತದಾನ ಮಾಡದ ಕಾರಣಕ್ಕೆ ಇಂತಹ ಫಲಿತಾಂಶ ಹೊರಹೊಮ್ಮಿದೆ’ ಎಂದು ಕನ್ಸರ್ವೇಟಿವ್ ಪಕ್ಷದ ಅಧ್ಯಕ್ಷ ಗ್ರೆಗ್ ಹ್ಯಾಂಡ್ಸ್ ದೂಷಿಸಿದರು.

ಮಾಜಿ ಪ್ರಧಾನಿ ಬೋರಿಸ್ ಜಾನ್ಸನ್ ಅವರ ನಿಷ್ಠಾವಂತ, ಮಾಜಿ ಸಚಿವ ನಡಿನ್ ಡೋರಿಸ್ ಅವರ ರಾಜೀನಾಮೆಯಿಂದ ಮಿಡ್ ಬೆಡ್‌ಫೋರ್ಡ್‌ಶೈರ್‌ ಸ್ಥಾನ ಮತ್ತು ಕುಡಿದು ಅನುಚಿತವಾಗಿ ವರ್ತಿಸಿದ ನಂತರ ಸಂಸದ ಕ್ರಿಸ್ ಪಿಂಚರ್ ಅವರು ರಾಜೀನಾಮೆ ನೀಡಿದ್ದರಿಂದ ವೆಸ್ಟ್ ಮಿಡ್‌ಲ್ಯಾಂಡ್ಸ್‌ನ ಟ್ಯಾಮ್‌ವರ್ತ್‌ ಸ್ಥಾನ ತೆರವಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.