ADVERTISEMENT

ವಿಶ್ವಸಂಸ್ಥೆ: ಯುನೆಸ್ಕೊ ಕಾರ್ಯಕಾರಿ ಮಂಡಳಿಗೆ ಭಾರತ ಮರು ಆಯ್ಕೆ

ಪಿಟಿಐ
Published 18 ನವೆಂಬರ್ 2021, 2:05 IST
Last Updated 18 ನವೆಂಬರ್ 2021, 2:05 IST
ಇತ್ತೀಚೆಗೆ ಪ್ಯಾರಿಸ್‌ನ ಯುನೆಸ್ಕೊ ಕಚೇರಿಯಲ್ಲಿ ನಡೆದ 75ನೇ ವರ್ಷಾಚರಣೆಯ ಸಂಭ್ರಮ
ಇತ್ತೀಚೆಗೆ ಪ್ಯಾರಿಸ್‌ನ ಯುನೆಸ್ಕೊ ಕಚೇರಿಯಲ್ಲಿ ನಡೆದ 75ನೇ ವರ್ಷಾಚರಣೆಯ ಸಂಭ್ರಮ   

ವಿಶ್ವಸಂಸ್ಥೆ: ವಿಶ್ವಸಂಸ್ಥೆಯ ಸಾಂಸ್ಕೃತಿಕ ಮತ್ತು ಶೈಕ್ಷಣಿಕ ಸಂಸ್ಥೆಯ(ಯುನೆಸ್ಕೊ) ಕಾರ್ಯಕಾರಿ ಮಂಡಳಿಗೆ ನಡೆದ ಮರುಚುನಾವಣೆಯಲ್ಲಿ ಬುಧವಾರ ಭಾರತ ಗೆಲುವು ಸಾಧಿಸಿದ್ದು, 2021–25ರ ಅವಧಿಗೂ ಸದಸ್ಯತ್ವ ಮುಂದುವರಿಯಲಿದೆ.

'ಭಾರತವು 164 ಮತಗಳನ್ನು ಪಡೆಯುವ ಮೂಲಕ ಯುನೆಸ್ಕೊದ ಕಾರ್ಯಕಾರಿ ಮಂಡಳಿಯ ಸದಸ್ಯ ಸ್ಥಾನಕ್ಕೆ 2021–25ರ ಅವಧಿಗೆ ಮರು ಆಯ್ಕೆಯಾಗಿದೆ' ಎಂದು ಪ್ಯಾರಿಸ್‌ನಲ್ಲಿರುವ ಯುನೆಸ್ಕೊಗೆ ಭಾರತದ ಖಾಯಂ ನಿಯೋಗದ ಟ್ವಿಟರ್‌ ಖಾತೆ ಪ್ರಕಟಿಸಿದೆ.

ಬುಧವಾರ ಯುನೆಸ್ಕೊ ಕಾರ್ಯಕಾರಿ ಮಂಡಳಿ ಸದಸ್ಯರ ಚುನಾವಣೆ ನಡೆಯಿತು. ಆರನೇ ಗುಂಪಿನ ಏಷ್ಯಾ ಮತ್ತು ಪೆಸಿಫಿಕ್‌ ರಾಷ್ಟ್ರಗಳ ಪೈಕಿ ಜಪಾನ್‌, ಫಿಲಿಪ್ಪೀನ್ಸ್, ವಿಯೆಟ್ನಾಂ, ಕುಕ್‌ ಐಲ್ಯಾಂಡ್ಸ್‌ ಹಾಗೂ ಚೀನಾ ಸಹ ಆಯ್ಕೆಯಾಗಿವೆ.

ADVERTISEMENT

ವಿಶ್ವಸಂಸ್ಥೆಯ ಮೂರು ಅಂಗಗಳಲ್ಲಿ ಯುನೆಸ್ಕೊ ಕಾರ್ಯಕಾರಿ ಮಂಡಳಿಯೂ ಸಹ ಒಂದು.

ವಿಶ್ವಸಂಸ್ಥೆಯ ಸಾಮಾನ್ಯ ಸಭೆಯ ಅಡಿಯಲ್ಲಿ ಯುನೆಸ್ಕೊ ಕಾರ್ಯಕಾರಿ ಮಂಡಳಿ ಕಾರ್ಯಾಚರಿಸುತ್ತದೆ. ಸಂಸ್ಥೆಯ ಕಾರ್ಯಕ್ರಮಗಳು ಹಾಗೂ ಪ್ರಧಾನ ನಿರ್ದೇಶಕರು ಸಲ್ಲಿಸುವ ಬಜೆಟ್‌ ಅಂದಾಜಿಗೆ ಸಂಬಂಧಿಸಿದಂತೆ ಕಾರ್ಯಕಾರಿ ಮಂಡಳಿಯು ಪರಿಶೀಲನೆ ನಡೆಸುತ್ತದೆ.

ಯುನೆಸ್ಕೊ ವೆಬ್‌ಸೈಟ್‌ ಪ್ರಕಾರ, ಕಾರ್ಯಕಾರಿ ಮಂಡಳಿಯು 58 ಸದಸ್ಯ ರಾಷ್ಟ್ರಗಳನ್ನು ಒಳಗೊಂಡಿದೆ. ಪ್ರತಿ ಸದಸ್ಯ ರಾಷ್ಟ್ರವು ನಾಲ್ಕು ವರ್ಷಗಳ ಕಾರ್ಯಾಚರಣೆ ಅವಧಿ ಹೊಂದಿರುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.