ADVERTISEMENT

ಅಣ್ವಸ್ತ್ರ ಯುದ್ಧದಲ್ಲಿ ಯಾರೂ ಗೆಲ್ಲಲಾಗದು: ಪುಟಿನ್‌

ರಾಯಿಟರ್ಸ್
Published 1 ಆಗಸ್ಟ್ 2022, 16:30 IST
Last Updated 1 ಆಗಸ್ಟ್ 2022, 16:30 IST
ವ್ಲಾಡಿಮಿರ್‌ ಪುಟಿನ್‌
ವ್ಲಾಡಿಮಿರ್‌ ಪುಟಿನ್‌   

ಲಂಡನ್‌: ‘ಅಣ್ವಸ್ತ್ರ ಯುದ್ಧದಲ್ಲಿ ಯಾರೂ ಜಯಶಾಲಿಗಳಾಗುವುದಿಲ್ಲ. ಅಂತಹ ಯುದ್ಧವನ್ನು ಎಂದಿಗೂ ಪ್ರಾರಂಭಿಸಬಾರದು’ ಎಂದು ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಹೇಳಿದ್ದಾರೆ.

ಉಕ್ರೇನ್ ವಿರುದ್ಧ ರಷ್ಯಾ ನಡೆಸುತ್ತಿರುವ ಯುದ್ಧ ಐದು ತಿಂಗಳಿಗೂ ಹೆಚ್ಚು ಅವಧಿಗೆ ಮುಂದುವರಿದಿರುವಾಗಲೇ, ಅಣ್ವಸ್ತ್ರ ಪ್ರಸರಣ ತಡೆ ಒಪ್ಪಂದ (ಎನ್‌ಪಿಟಿ) ಕುರಿತು ನಡೆದ ಸಮಾವೇಶದಲ್ಲಿ ಭಾಗವಹಿಸಿದವರಿಗೆ ಪುಟಿನ್ ಅವರು ಪತ್ರ ಬರೆದಿದ್ದಾರೆ.

‘ಅಣು ಯುದ್ಧದಲ್ಲಿ ಯಾರೂ ವಿಜೇತರು ಇರುವುದಿಲ್ಲ. ಅಂತಹ ಯುದ್ಧಕ್ಕೆ ಯಾರೂ ಕುಮ್ಮಕ್ಕು ನೀಡಬಾರದು. ವಿಶ್ವ ಸಮುದಾಯದ ಎಲ್ಲಾ ಸದಸ್ಯ ರಾಷ್ಟ್ರಗಳಿಗೂ ಸಮಾನವಾದ ಮತ್ತು ಅಖಂಡವಾದ ಭದ್ರತೆಯ ಪರ ನಾವು ನಿಲ್ಲುತ್ತೇವೆ’ ಎಂದು ಅವರು ಪತ್ರದಲ್ಲಿ ಹೇಳಿದ್ದಾರೆ.

ADVERTISEMENT

ಉಕ್ರೇನ್‌ ಮೇಲೆ ರಷ್ಯಾ ಕಳೆದ ಫೆಬ್ರುವರಿ 24ರಂದು ಸೇನಾ ಕಾರ್ಯಾಚರಣೆ ಆರಂಭಿಸಿದ ನಂತರ ಅಣ್ವಸ್ತ್ರ ಸಂಘರ್ಷದ ಅಪಾಯ ತಾರಕ್ಕೇರಿ, ವಿಶ್ವಸಮುದಾಯದಲ್ಲಿ ಕಳವ್ಯಕ್ತವಾಗಿತ್ತು. ಸೇನಾ ಕಾರ್ಯಾಚರಣೆಯಲ್ಲಿಬಾಹ್ಯ ಶಕ್ತಿಗಳು ಮಧ್ಯಪ್ರವೇಶಿಸುವ ಯಾವುದೇ ಪ್ರಯತ್ನವನ್ನು ಸಹಿಸಲಾಗದು ಎಂದು ರಷ್ಯಾ ಅಣ್ವಸ್ತ್ರ ಸಜ್ಜಿತ ರಾಷ್ಟ್ರವೆಂದು ಉಲ್ಲೇಖಿಸಿ ಪುಟಿನ್‌ ತಮ್ಮ ಭಾಷಣದಲ್ಲಿ ಎಚ್ಚರಿಕೆ ನೀಡಿದ್ದರು. ಇದರ ಬೆನ್ನಲ್ಲೇ ತನ್ನ ನೆರೆಯ ಮಿತ್ರರಾಷ್ಟ್ರ ಬೆಲರೂಸ್‌ನಲ್ಲಿ ತಮ್ಮ ದೇಶದ ಅಣ್ವಸ್ತ್ರ ಪಡೆಯನ್ನು ಕಟ್ಟೆಚ್ಚರದಲ್ಲಿರಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.