ADVERTISEMENT

ಕೋವಿಡ್ ಔಷಧ ಪೂರೈಕೆಗೆ ಸೇನೆ ನಿಯೋಜನೆ

ಉತ್ತರ ಕೊರಿಯಾ ಸರ್ವಾಧಿಕಾರಿ ಕಿಮ್ ಜೊಂಗ್ ಉನ್ ಆದೇಶ

​ಪ್ರಜಾವಾಣಿ ವಾರ್ತೆ
Published 16 ಮೇ 2022, 16:06 IST
Last Updated 16 ಮೇ 2022, 16:06 IST
ಉತ್ತರ ಕೊರಿಯಾ ಅಧ್ಯಕ್ಷ ಕಿಮ್ ಜೊಂಗ್ ಉನ್ ಅವರು ಭಾನುವಾರ ರಾಜಧಾನಿ ಪ್ಯೊಂಗ್ಯಾಂಗ್ ಭೇಟಿ ನೀಡಿ ಔಷಧ ಅಂಗಡಿಗಳನ್ನು ಪರಿಶೀಲನೆ ನಡೆಸಿದರು. ಎಎಫ್‌ಪಿ ಚಿತ್ರ
ಉತ್ತರ ಕೊರಿಯಾ ಅಧ್ಯಕ್ಷ ಕಿಮ್ ಜೊಂಗ್ ಉನ್ ಅವರು ಭಾನುವಾರ ರಾಜಧಾನಿ ಪ್ಯೊಂಗ್ಯಾಂಗ್ ಭೇಟಿ ನೀಡಿ ಔಷಧ ಅಂಗಡಿಗಳನ್ನು ಪರಿಶೀಲನೆ ನಡೆಸಿದರು. ಎಎಫ್‌ಪಿ ಚಿತ್ರ   

ಸೋಲ್(ರಾಯಿಟರ್ಸ್): ದೇಶದಲ್ಲಿ ಕೊರೊನಾ ವೈರಸ್ ವಿರುದ್ಧದ ಹೋರಾಟಕ್ಕಾಗಿ ರಾಷ್ಟ್ರ ರಾಜಧಾನಿ ಪ್ಯೊಂಗ್ಯಾಂಗ್‌ನಲ್ಲಿ ಕೋವಿಡ್‌ ಲಸಿಕೆ ಪೂರೈಕೆಯಲ್ಲಿ ವ್ಯತ್ಯಯವಾಗದಂತೆ ನೋಡಿಕೊಳ್ಳುವಂತೆ ಉತ್ತರ ಕೊರಿಯಾದ ಸರ್ವಾಧಿಕಾರಿ ಕಿಮ್ ಜೊಂಗ್ ಉನ್ ಅವರು ಸೇನೆಗೆ ಸೂಚನೆ ನೀಡಿದ್ದಾರೆ.

ಕೋವಿಡ್ ನಿಯಂತ್ರಣಕ್ಕೆ ದೇಶ ಖರೀದಿಸಿದ ಔಷಧಗಳು ಜನ ಸಾಮಾನ್ಯರಿಗೆ ತ್ವರಿತ ಮತ್ತು ನಿಖರವಾಗಿ ತಲುಪುತ್ತಿಲ್ಲ ಎಂದು ಪಾಲಿಟ್ ಬ್ಯೂರೊ ಸಭೆಯಲ್ಲಿ ಅವರು ಅಸಮಾಧಾನ ವ್ಯಕ್ತಪಡಿಸಿದರು ಎಂದು ಸರ್ಕಾರಿ ಸ್ವಾಮ್ಯದ ಸುದ್ದಿಸಂಸ್ಥೆ ಕೆಸಿಎನ್ಎ ವರದಿ ಮಾಡಿದೆ. ಅಲ್ಲದೆ ಭಾನುವಾರ ಪ್ಯೊಂಗ್ಯಾಂಗ್‌ನಲ್ಲಿರುವ ಔಷಧ ಅಂಗಡಿಗಳಿಗೆ ಭೇಟಿ ನೀಡಿದ ಅವರು, ಕೋವಿಡ್ ಔಷಧಗಳ ಪೂರೈಕೆ ಬಗ್ಗೆ ಪರಿಶೀಲನೆ ನಡೆಸಿದರು.

ಪ್ಯೊಂಗ್ಯಾಂಗ್‌ನಲ್ಲಿ ಕೋವಿಡ್ ಔಷಧಗಳು ವ್ಯತ್ಯಯವಾಗದಂತೆ ಮತ್ತು ಪೂರೈಕೆಯಲ್ಲಿ ಸ್ಥಿರತೆ ಕಾಪಾಡಲು ಬಲಿಷ್ಠ ಸೇನಾಪಡೆಯನ್ನು ನಿಯೋಜಿಸಿ ಕಿಮ್ ಅವರು ಆದೇಶಿಸಿದ್ದಾರೆ. ಅಲ್ಲದ ಬೇಜವಾಬ್ದಾರಿಯುತ ಕರ್ತವ್ಯದ ಸ್ವಭಾವ, ಕ್ಯಾಬಿನೆಟ್ ಕಾರ್ಯಚಟುವಟಿಕೆ ಮತ್ತು ಸಾರ್ವಜನಿಕ ಆರೋಗ್ಯ ವಲಯದ ಬಗ್ಗೆ ಅವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ ಎಂದು ವರದಿಯಲ್ಲಿ ತಿಳಿಸಲಾಗಿದೆ.

ADVERTISEMENT

ಕಳೆದ ವಾರವಷ್ಟೇ ಉತ್ತರ ಕೊರಿಯಾ ದೇಶದಲ್ಲಿ ಕೊರೊನಾ ವೇಗವಾಗಿ ವ್ಯಾಪಿಸುತ್ತಿದೆ ಎಂಬುದನ್ನು ಮೊದಲ ಬಾರಿಗೆ ಒಪ್ಪಿಕೊಂಡಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.