ಮಾಸ್ಕೊ: ಅಮೆರಿಕದ ಯುದ್ಧ ವಿಮಾನಗಳು ಅಣ್ವಸ್ತ್ರ ಧಾರಣ ಸಾಮರ್ಥ್ಯ ಹೊಂದಿರುವ ಬಾಂಬರ್‌ಗಳ ಹಾರಾಟಕ್ಕೆ ಪ್ರತಿರೋಧ ವ್ಯಕ್ತಪಡಿಸಿದೆ ಎಂದು ರಷ್ಯಾ ಮೂಲದ ಆರ್‌ಐಎ ಸುದ್ದಿಸಂಸ್ಥೆ ಬುಧವಾರ ವರದಿ ಮಾಡಿದೆ.
ರಷ್ಯಾದ ರಕ್ಷಣಾ ಸಚಿವಾಲಯದ ಮಾಹಿತಿಯನ್ನು ಉಲ್ಲೇಖಿಸಿರುವ ಆರ್‌ಐಎ, ಅಮೆರಿಕ ಬಳಿಯ ಕಡಲಿನಲ್ಲಿ ತಟಸ್ಥ ಪ್ರದೇಶದ ಮೇಲೆ ವಾಡಿಕೆಯಂತೆ ಈ ಬಾಂಬರ್‌ಗಳು ಹಾರಾಟ ನಡೆಸುವ ವೇಳೆ ಈ ಘಟನೆ ನಡೆದಿದೆ ಎಂದು ವರದಿ ಮಾಡಿದೆ.
ಟ್ಯೂಪ್‌ಲೆವ್ ಟು–95ಎಂಎಸ್ ಬಾಂಬರ್‌ಗಳು ಅಂತರರಾಷ್ಟ್ರೀಯ ನಿಯಮಗಳಿಗೆ ಅನುಸಾರವಾಗಿಯೇ ಹಾರಾಟ ನಡೆಸಿದ್ದವು. ಅಮೆರಿಕದ ಎಫ್–22 ರಾಪ್ಟರ್ ಯುದ್ಧವಿಮಾನಗಳು ಈ ಬಾಂಬರ್‌ಗಳಿಗೆ ಪ್ರತಿರೋಧವೊಡ್ಡಿದವು ಎಂದೂ ರಷ್ಯಾ ಹೇಳಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.