ADVERTISEMENT

ಸಿರಿಯಾದಲ್ಲಿ ‘ಇಸ್ಲಾಮಿಕ್ ಸ್ಟೇಟ್’ನ 35 ನೆಲೆಗಳ ಮೇಲೆ ಅಮೆರಿಕ ವೈಮಾನಿಕ ದಾಳಿ

ಏಜೆನ್ಸೀಸ್
Published 11 ಜನವರಿ 2026, 4:18 IST
Last Updated 11 ಜನವರಿ 2026, 4:18 IST
<div class="paragraphs"><p>ಸಿರಿಯಾ ಹಲವೆಡೆ ಅಮೆರಿಕದ ಸೇನಾಪಡೆಗಳು&nbsp;ವೈಮಾನಿಕ ದಾಳಿ ನಡೆಸಿರುವ ದೃಶ್ಯ</p></div>

ಸಿರಿಯಾ ಹಲವೆಡೆ ಅಮೆರಿಕದ ಸೇನಾಪಡೆಗಳು ವೈಮಾನಿಕ ದಾಳಿ ನಡೆಸಿರುವ ದೃಶ್ಯ

   

ಫ್ಲಾರಿಡಾ: ಸಿರಿಯಾದಲ್ಲಿರುವ ‘ಇಸ್ಲಾಮಿಕ್ ಸ್ಟೇಟ್’ ವಿರುದ್ಧ ಅಮೆರಿಕ ಮಿಲಿಟರಿ ಕಾರ್ಯಾಚರಣೆ ಪ್ರಾರಂಭಿಸಿದೆ. ಅಮೆರಿಕದ ಸೆಂಟ್ರಲ್‌ ಕಮಾಂಡ್‌ ಪಡೆಗಳು ‘ಆಪರೇಷನ್ ಹಾಕೈ’ ಕಾರ್ಯಾಚರಣೆಯ ಭಾಗವಾಗಿ 35ಕ್ಕೂ ಹೆಚ್ಚು ಭಯೋತ್ಪಾದಕ ನೆಲೆಗಳ ಮೇಲೆ ದೊಡ್ಡ ಪ್ರಮಾಣದ ವೈಮಾನಿಕ ದಾಳಿ ನಡೆಸಿವೆ.

‘ಅಮೆರಿಕ ಕಾಲಮಾನದ ಪ್ರಕಾರ ಸುಮಾರು ಮಧ್ಯಾಹ್ನ 12:30ಕ್ಕೆ ದಾಳಿಗಳು ನಡೆದಿವೆ. ಈ ದಾಳಿಗಳು ಸಿರಿಯಾದ ವಿವಿಧ ಪ್ರದೇಶಗಳಲ್ಲಿನ ಇಸ್ಲಾಮಿಕ್ ಸ್ಟೇಟ್ ನೆಲೆಗಳನ್ನು ಗುರಿಯಾಗಿಸಿಕೊಂಡಿವೆ. 90ಕ್ಕೂ ಹೆಚ್ಚು ಆಯುಧಗಳನ್ನು ಬಳಸಿ ಉಗ್ರರ ನೆಲೆಗಳನ್ನು ಧ್ವಂಸ ಮಾಡಲಾಗಿದೆ’ ಎಂದು ಅಮೆರಿಕದ ಸೆಂಟ್ರಲ್‌ ಕಮಾಂಡ್ ತಿಳಿಸಿದೆ.

ADVERTISEMENT

‘ನಮ್ಮದು ಭಯೋತ್ಪಾದನೆಯ ವಿರುದ್ಧದ ದಾಳಿಯಾಗಿದೆ. ಅಮೆರಿಕ ಭಯೋತ್ಪಾದನೆ ವಿರುದ್ಧ ಹೋರಾಡಲು ಬದ್ಧವಾಗಿದೆ. ಭಯೋತ್ಪಾದನೆ ವಿರುದ್ಧ ನಿರಂತರವಾಗಿ ಹೋರಾಟ ಮಾಡುತ್ತಲೇ ಇರುತ್ತದೆ. ಸೇನಾ ಪಡೆಗಳು ಮತ್ತು ಮಿತ್ರ ಪಡೆಗಳ ಮೇಲಿನ ಭಯೋತ್ಪಾದಕ ದಾಳಿಗಳನ್ನು ತಡೆಗಟ್ಟುವುದು ನಮ್ಮ ಉದ್ದೇಶ. ಭವಿಷ್ಯದ ಬೆದರಿಕೆಗಳನ್ನು ಮೆಟ್ಟಿ ನಿಲ್ಲುವುದು, ಈ ಪ್ರದೇಶದಲ್ಲಿ ಭದ್ರತೆಯನ್ನು ಖಚಿತಪಡಿಸುವುದೇ ಇವತ್ತಿನ ದಾಳಿಯ ಗುರಿ ಆಗಿತ್ತು. ನಮ್ಮ ಪಡೆಗಳಿಗೆ ಹಾನಿ ಮಾಡಲು ಪ್ರಯತ್ನಿಸುವ ಯಾರೇ ಆದರೂ, ಎಲ್ಲಿಯೇ ಇದ್ದರೂ ಹೊಸಕಿ ಹಾಕುತ್ತೇವೆ’ ಎಂದು ಸೆಂಟ್ರಲ್‌ ಕಮಾಂಡ್ ಎಚ್ಚರಿಕೆ ನೀಡಿದೆ.

2025ರ ಡಿಸೆಂಬರ್ 13ರಂದು ಸಿರಿಯಾದ ಪಾಲ್ಮಿರಾದಲ್ಲಿ ಐಸಿಸ್ ಉಗ್ರರು ನಡೆಸಿದ ದಾಳಿಯಲ್ಲಿ ಅಮೆರಿಕದ ಇಬ್ಬರು ಸೇನಾ ಸಿಬ್ಬಂದಿ ಮತ್ತು ನಾಗರಿಕರೊಬ್ಬರು ಮೃತಪಟ್ಟಿದ್ದರು. ಇದಕ್ಕೆ ಪ್ರತೀಕಾರ ತೀರಿಸಿಕೊಳ್ಳುವುದಾಗಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಪ್ರತಿಜ್ಞೆ ಮಾಡಿದ್ದರು. ಅದರಂತೆಯೇ ಡಿಸೆಂಬರ್ 19ರಂದು ‘ಆಪರೇಷನ್ ಹಾಕೈ’ ಕಾರ್ಯಾಚರಣೆ ಪ್ರಾರಂಭಿಸಲಾಗಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.