ಲಂಡನ್: ಅಮೆರಿಕ ಮತ್ತು ಚೀನಾದ ಉನ್ನತ ಮಟ್ಟದ ನಿಯೋಗವು ಸೋಮವಾರ ಲಂಡನ್‌ನಲ್ಲಿ ಭೇಟಿಯಾಗಿ ಉಭಯದ ದೇಶಗಳ ನಡುವಿನ ವಾಣಿಜ್ಯ ವ್ಯವಹಾರಗಳಿಗೆ ಸಂಬಂಧಿಸಿದಂತೆ ಮಾತುಕತೆ ನಡೆಸಿತು.
ಆಮದು ವಸ್ತುಗಳ ಮೇಲೆ ಹೇರಿದ್ದ ಭಾರಿ ಪ್ರಮಾಣದ ಪ್ರತಿ ಸುಂಕವನ್ನು ಮೂರು ತಿಂಗಳವರೆಗೆ ತಗ್ಗಿಸುವ ಒಪ್ಪಂದವನ್ನು ಅಮೆರಿಕ ಹಾಗೂ ಚೀನಾ ಮೇ 12ರಂದು ಜಿನೀವಾದಲ್ಲಿ ನಡೆದ ಸಭೆಯಲ್ಲಿ ಕೈಗೊಂಡಿದ್ದವು. ಇದರಿಂದ ಎರಡು ದೇಶಗಳ ನಡುವಿನ ‘ಸುಂಕ ಸಮರ’ಕ್ಕೆ ತಾತ್ಕಾಲಿಕವಾಗಿ ತೆರೆಬಿದ್ದಿತ್ತು. ಹೀಗಾಗಿ ಜಾಗತಿಕ ಷೇರುಪೇಟೆಗಳಲ್ಲಿ ಚೇತರಿಕೆ ಕಂಡುಬಂದಿತ್ತು.
‘ಸುಂಕ ಸಮರ’ ಕೊನೆಗೊಳಿಸಿ, ವಾಣಿಜ್ಯ ವ್ಯವಹಾರ ಸುಗಮಗೊಳಿಸುವ ಉದ್ದೇಶದಿಂದ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಚೀನಾದ ಅಧ್ಯಕ್ಷ ಷಿ ಜಿನ್‌ಪಿಂಗ್ ಅವರೊಂದಿಗೆ ಇತ್ತೀಚೆಗೆ ದೂರವಾಣಿಯಲ್ಲಿ ಮಾತುಕತೆ ನಡೆಸಿದ್ದರು. ಇದರ ಬೆನ್ನಲ್ಲೇ ಉನ್ನತ ಮಟ್ಟದ ನಿಯೋಗದ ಎರಡನೆಯ ಸುತ್ತಿನ ಮಾತುಕತೆ ನಡೆದಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.