ADVERTISEMENT

ಚೀನಾವನ್ನು ಎದುರಿಸಲು ಭಾರತ-ಅಮೆರಿಕ ನಿಕಟ ಸಹಕಾರ ಅತಿಮುಖ್ಯ: ಅಮೆರಿಕ ರಾಯಭಾರಿ

ಏಜೆನ್ಸೀಸ್
Published 6 ಜನವರಿ 2021, 2:32 IST
Last Updated 6 ಜನವರಿ 2021, 2:32 IST
ಭಾರತದಲ್ಲಿ ಅಮೆರಿಕ ರಾಯಭಾರಿ ಕೆನ್ನೆತ್ ಜಸ್ಟರ್
ಭಾರತದಲ್ಲಿ ಅಮೆರಿಕ ರಾಯಭಾರಿ ಕೆನ್ನೆತ್ ಜಸ್ಟರ್   

ನವದೆಹಲಿ: ವಾಸ್ತವ ನಿಯಂತ್ರಣ ರೇಖೆಯಲ್ಲಿ (ಎಲ್‌ಎಸಿ) ಚೀನಾದಿಂದ ಎದುರಾಗುತ್ತಿರುವ ಬೆದರಿಕೆಯನ್ನು ಎದುರಿಸಲು ಭಾರತ ಹಾಗೂ ಅಮೆರಿಕ ನಡುವೆ ನಿಕಟ ಸಮನ್ವಯ ಅತಿಮುಖ್ಯವಾಗಿದೆ ಎಂದು ಅಧಿಕಾರದಿಂದ ಕೆಳಗಿಳಿಯುತ್ತಿರುವ ಭಾರತದಲ್ಲಿ ಅಮೆರಿಕ ರಾಯಭಾರಿ ಕೆನ್ನೆತ್ ಜಸ್ಟರ್ ತಿಳಿಸಿದರು.

ಯಾವುದೇ ದೇಶ ಭಾರತೀಯರು ಹಾಗೂ ಭಾರತದ ಭದ್ರತೆಗೆ ಹೆಚ್ಚಿನಸಹಕಾರವನ್ನು ನೀಡುತ್ತಿಲ್ಲ. ಭಾರತವು ಗಡಿಯಲ್ಲಿ ಚೀನಾದಿಂದ ನಿರಂತರವಾಗಿ ಬಿಕ್ಕಟ್ಟು ಎದುರಿಸುತ್ತಿರುವುದರಿಂದ ನಿಕಟ ಸಮನ್ವಯ ಮಹತ್ವದ್ದಾಗಿದೆ ಎಂದು ವಿದಾಯ ಭಾಷಣದಲ್ಲಿ ಹೇಳಿದರು.

ಭಾರತವು ತನ್ನ ಮಿಲಿಟರಿ ಉತ್ಪನ್ನಗಳನ್ನು ದೇಶದಲ್ಲೇ ಉತ್ಪಾದಿಸಲು ಬಯಸುತ್ತಿದೆ. ಈ ಪ್ರಯತ್ನದಲ್ಲಿ ಅಮೆರಿಕವು ಭಾರತದೊಂದಿಗೆ ಹೆಚ್ಚಿನ ಪಾಲುದಾರಿಕೆಯನ್ನು ಎದುರು ನೋಡುತ್ತಿದೆ ಎಂದವರು ತಿಳಿಸಿದರು.

ADVERTISEMENT

ರಕ್ಷಣಾ ಮತ್ತು ಭದ್ರತಾ ಸಹಕಾರ ಬಲಪಡಿಸಲು ಭಾರತ ಹಾಗೂ ಅಮೆರಿಕ ಬದ್ಧವಾಗಿದೆ ಎಂದು ಜಸ್ಟರ್ ಹೇಳಿದರು. ಹೊರಗಿನ ಬೆದರಿಕೆಗಳಿಂದ ರಾಷ್ಟ್ರವನ್ನು ಸುರಕ್ಷಿತವಾಗಿರಿಸಲು ಕಳೆದ ನಾಲ್ಕು ವರ್ಷಗಳಲ್ಲಿ ಉಭಯ ದೇಶಗಳು ಉದ್ದೇಶಪೂರ್ವಕವಾಗಿ ಸಹಕಾರವನ್ನು ವೃದ್ಧಿಸಿಕೊಂಡಿದೆ. ಇದು ಯುದ್ಧ ವಿಮಾನಗಳನ್ನು ಹೊಂದಿದ್ದು, ಉಭಯ ದೇಶಗಳ ರಕ್ಷಣಾ ಕೈಗಾರಿಕಾ ಸಹಕಾರವನ್ನು ಮತ್ತಷ್ಟು ವೃದ್ಧಿಸುವ ನಿರೀಕ್ಷೆಯಿದೆ ಎಂದರು.

ನಮ್ಮ ದೇಶವು ಭಾರತದೊಂದಿಗೆ ಬೇರ್ಪಡಿಸಲು ಸಾಧ್ಯವಾಗದಂತಹ ಸಂಬಂಧವನ್ನು ಹೊಂದಿದೆ. ಜಾಗತಿಕ ಶಕ್ತಿಯಾಗಿ ಭಾರತ ಹೊರಹೊಮ್ಮಲು ಅಮೆರಿಕದ ಬೆಂಬಲ ಸ್ಪಷ್ಟವಾಗಿದೆ. ಅಮೆರಿಕದಷ್ಟು ಜಗತ್ತಿನ ಯಾವುದೇ ದೇಶವು ಭಾರತದೊಂದಿಗೆ ಭಯೋತ್ಪಾದನೆ ವಿರುದ್ಧ ಹೋರಾಡಲು ಮತ್ತು ರಕ್ಷಣಾ ಬಲವೃದ್ಧಿಗೆ ಸಹಕಾರವನ್ನು ಹೊಂದಿಲ್ಲ ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.