ADVERTISEMENT

ಶ್ರೀಲಂಕಾಗೆ ಪ್ರವಾಸ ಬೇಡ: ಜನತೆಗೆ ಅಮೆರಿಕ ಸಲಹೆ

ಪಿಟಿಐ
Published 7 ಏಪ್ರಿಲ್ 2022, 12:26 IST
Last Updated 7 ಏಪ್ರಿಲ್ 2022, 12:26 IST
   

ವಾಷಿಂಗ್ಟನ್‌ (ಪಿಟಿಐ): ಆರ್ಥಿಕ ಬಿಕ್ಕಟ್ಟು ಎದುರಿಸುತ್ತಿರುವ ದ್ವೀಪ ರಾಷ್ಟ್ರ ಶ್ರೀಲಂಕಾಕ್ಕೆ ಪ್ರವಾಸ ತೆರಳದಂತೆ ಅಮೆರಿಕ ತನ್ನ ಪ್ರಜೆಗಳಿಗೆ ಅಮೆರಿಕ ಸಲಹೆ ನೀಡಿದೆ.

ಶ್ರೀಲಂಕಾದಲ್ಲಿ ಇಂಧನ, ಅಡುಗೆ ಎಣ್ಣೆ, ಆಹಾರ ಮತ್ತು ಔಷಧಿ ಕೊರತೆ ಬಿಗಡಾಯಿಸಿದೆ. ಅಲ್ಲದೆ ಕೋವಿಡ್‌ ಮತ್ತು ಭಯೋತ್ಪಾದನಾ ದಾಳಿ ಅಪಾಯ ಇರುವುದರಿಂದ ಪ್ರಯಾಣ ಕೈಗೊಳ್ಳವ ಮುನ್ನ ಚಿಂತಿಸಬೇಕು ಎಂದು ರಕ್ಷಣಾ ಸಚಿವಾಲಯ ಸಲಹೆ ಮಾಡಿದೆ.

ಅಲ್ಲದೆ, ಕೋವಿಡ್‌ ಹರಡುವಿಕೆ ಪ್ರಮಾಣವೂ ಅಲ್ಲಿ ಹೆಚ್ಚಾಗಿದೆ ಎಂದು ರೋಗ ನಿಯಂತ್ರಣ ಕೇಂದ್ರದ (ಸಿಡಿಸಿ) ಪ್ರಯಾಣದ ಆರೋಗ್ಯ ಮಾರ್ಗಸೂಚಿ ಬಿಡುಗಡೆಗೊಳಿಸಿದೆ ಎಂದು ಉಲ್ಲೇಖಿಸಿದೆ.

ADVERTISEMENT

ಆರ್ಥಿಕ ಬಿಕ್ಕಟ್ಟಿನ ಕಾರಣದಿಂದ ಶ್ರೀಲಂಕಾದಲ್ಲಿ ಪ್ರತಿಭಟನೆಗಳು ನಡೆಯುತ್ತಿವೆ. ಅಂಗಡಿಗಳ ಎದುರು ಸಾಲು ಕಾಣುತ್ತಿದೆ. ವಿದ್ಯುತ್‌ ಸಮಸ್ಯೆಯೂ ತೀವ್ರಗೊಂಡಿದೆ ಎಂಬುದನ್ನು ಸಚಿವಾಲಯವು ಉಲ್ಲೇಖಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.