ಡೊನಾಲ್ಡ್ ಟ್ರಂಪ್
– ಎಪಿ/ಪಿಟಿಐ ಚಿತ್ರ
ವಾಷಿಂಗ್ಟನ್ : ‘ಪ್ರಸ್ತಾವಿತ ಗೋಲ್ಡ್ ಕಾರ್ಡ್ ವೀಸಾ ವ್ಯವಸ್ಥೆಯಿಂದ ಅಮೆರಿಕದ ಕಂಪನಿಗಳು ಹಾರ್ವರ್ಡ್, ಸ್ಟ್ಯಾನ್‌ಫೋರ್ಡ್ ವಿಶ್ವವಿದ್ಯಾಲಯದಲ್ಲಿ ಕಲಿಯುವ ಭಾರತದ ಪದವೀಧರರನ್ನು ನೇಮಕ ಮಾಡಿಕೊಳ್ಳಬಹುದು’ ಎಂದು ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ತಿಳಿಸಿದ್ದಾರೆ.
ಐವತ್ತು ಲಕ್ಷ ಡಾಲರ್ (ಅಂದಾಜು ₹43.45 ಕೋಟಿ) ನೀಡಿ ‘ಗೋಲ್ಡ್ ಕಾರ್ಡ್’ ವೀಸಾ ಪಡೆಯಬಹುದಾದ ವ್ಯವಸ್ಥೆ ಆರಂಭಿಸುವುದಾಗಿ ಟ್ರಂಪ್ ಬುಧವಾರ ಘೋಷಿಸಿದ್ದರು. ಈ ವೀಸಾ ಪಡೆಯುವವರಿಗೆ ಅಮೆರಿಕದ ಪೌರತ್ವವೂ ಸಿಗಲಿದೆ.
‘ಈಗಿರುವ ವಲಸೆ ನಿಯಮವು ಅಂತರರಾಷ್ಟ್ರೀಯ ಪ್ರತಿಭೆಗಳನ್ನು ಅಮೆರಿಕದಲ್ಲಿ ಉಳಿಸಿಕೊಳ್ಳಲು ಅಡ್ಡಿಯಾಗುತ್ತಿದೆ. ಅದರಲ್ಲೂ ಭಾರತೀಯರು ಅಮೆರಿಕದಿಂದ ದೂರ ಉಳಿಯುವಂತಾಗಿದೆ. ಕೆಲಸ ಸಿಕ್ಕರೂ ಇಲ್ಲಿ ನೆಲಸುವ ಅವಕಾಶ ಸಿಗದ ಕಾರಣ ತಮ್ಮ ದೇಶಕ್ಕೆ ಹಿಂತಿರುಗುತ್ತಾರೆ. ಅಲ್ಲಿ ಉದ್ಯಮಗಳನ್ನು ಆರಂಭಿಸಿ, ಶತಕೋಟ್ಯಧಿಪತಿಗಳಾಗಿ ನೂರಾರು ಮಂದಿಗೆ ಉದ್ಯೋಗ ನೀಡುತ್ತಿದ್ದಾರೆ’ ಎಂದು ಅವರು ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.