ADVERTISEMENT

ಕೋವಿಡ್‌ ಬಿಕ್ಕಟ್ಟು ನಿವಾರಣೆಯಲ್ಲಿ ಭಾರತದ ಪ್ರಯತ್ನ ಶ್ಲಾಘನೀಯ: ಅಮೆರಿಕ ಸಂಸದ

ಪಿಟಿಐ
Published 19 ಮೇ 2021, 6:08 IST
Last Updated 19 ಮೇ 2021, 6:08 IST
ನರೇಂದ್ರ ಮೋದಿ
ನರೇಂದ್ರ ಮೋದಿ   

ವಾಷಿಂಗ್ಟನ್‌: ಕೋವಿಡ್‌–19 ಬಿಕ್ಕಟ್ಟಿನ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ಪ್ರಯತ್ನವನ್ನು ಶ್ಲಾಘಿಸಿರುವ ಅಮೆರಿಕದ ಸಂಸದರೊಬ್ಬರು ಭಾರತವು ಆದಷ್ಟು ಬೇಗ ಈ ಸವಾಲಿನ ವಿರುದ್ಧ ಜಯ ಸಾಧಿಸಲಿದೆ ಎಂದಿದ್ದಾರೆ.

‘ಭಾರತ ಮತ್ತು ಅಮೆರಿಕವು ವಿಶೇಷ ಪಾಲುದಾರಿಕೆಯನ್ನು ಹಂಚಿಕೊಂಡಿವೆ. ಭಾರತಕ್ಕೆ ಸಾಂಕ್ರಾಮಿಕವನ್ನು ಎದುರಿಸಲು ಅಗತ್ಯವಿರುವ ಸಾಧನಗಳನ್ನು ಪೂರೈಸಲು ಅಮೆರಿಕ ಪ್ರಯತ್ನಿಸುತ್ತಿದೆ. ಇದಕ್ಕೆ ನನ್ನ ಬೆಂಬಲವಿದೆ’ ಎಂದು ಸಂಸದ ಜೋ ವಿಲ್ಸನ್‌ ಅವರು ಹೇಳಿದ್ದಾರೆ.

‘ಕೋವಿಡ್‌ಗೆ ತುತ್ತಾಗಿರುವ ಭಾರತೀಯರ ಮೇಲೆ ಅನುಕಂಪವಿದೆ. ಈ ಹೃದಯ ವಿದ್ರಾವಕ ಬಿಕ್ಕಟ್ಟನ್ನು ಎದುರಿಸಲು ಪ್ರಧಾನಿ ನರೇಂದ್ರ ಮೋದಿ ಕೈಗೊಳ್ಳುತ್ತಿರುವ ಕ್ರಮಗಳು ಪ್ರಶಂಸನೀಯ’ ಎಂದು ವಿಲ್ಸನ್‌ ಅಭಿಪ್ರಾಯಪಟ್ಟಿದ್ದಾರೆ.

ADVERTISEMENT

‘ಸಿಇಒ ಮತ್ತು ಅಧ್ಯಕ್ಷ ಕೆ.ವಿ.ಕುಮಾರ್ ನೇತೃತ್ವದ ಭಾರತೀಯ ಅಮೆರಿಕನ್‌ ಇಂಟರ್‌ನ್ಯಾಷನಲ್‌ ಚೇಂಬರ್‌ ಆಫ್‌ ಕಾಮರ್ಸ್‌(ಐಎಐಸಿಸಿ) ಭಾರತಕ್ಕೆ ಬಿಕ್ಕಟ್ಟನ್ನು ಎದುರಿಸಲು ನೆರವಾಗುತ್ತಿದೆ. ಐಎಐಸಿಸಿಯು ಡಾ.ನರಸಿಂಹಲು ಅವರ ನೇತೃತ್ವದಲ್ಲಿ ತಂಡವೊಂದನ್ನು ರಚಿಸಿದೆ. ಈ ತಂಡವು ಅಮೆರಿಕದಲ್ಲಿರುವ ಭಾರತದ ರಾಯಭಾರಿತರನ್‌ಜೀತ್‌ ಸಿಂಗ್‌ ಸಂಧು, ಭಾರತದ ಕಾನ್ಸುಲ್‌ ಜನರಲ್‌ಡಾ.ಸ್ವಾತಿ ಕುಲಕರ್ಣಿ ಮತ್ತು ಅಮಿತ್‌ ಕುಮಾರ್‌ ಅವರ ಮೂಲಕ ಭಾರತಕ್ಕೆ ನೆರವು ಒದಗಿಸುತ್ತಿದೆ’ ಎಂದು ಅವರು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.