ವಾಷಿಂಗ್ಟನ್: ಆಪ್ಗಾನಿಸ್ತಾನದ ಗಡಿಯುದ್ಧಕ್ಕೂ ನಡೆಯುತ್ತಿರುವ ಭಯೋತ್ಪಾದಕ ಚಟುವಟಿಕೆಗಳಿಗೆ ಸಂಬಂಧಿಸಿದಂತೆ ಅಮೆರಿಕವು ಪಾಕಿಸ್ತಾನದೊಂದಿಗೆ ಮಾತುಕತೆ ಮುಂದುವರಿಸಿದೆ ಎಂದು ಶ್ವೇತಭವನದ ಮಾಧ್ಯಮ ಕಾರ್ಯದರ್ಶಿ ಝಾನ್ ಕಿರ್ಬಿ ತಿಳಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ನಾವು ಅಫ್ಘಾನಿಸ್ತಾನದ ಗಡಿಯಲ್ಲಿ ನಡೆಯುತ್ತಿರುವ ಭಯೋತ್ಪಾದಕ ವಿಷಯಗಳ ಬಗ್ಗೆ ಪಾಕಿಸ್ತಾನದೊಂದಿಗಿನ ಚರ್ಚೆಯನ್ನು ಮುಂದುವರಿಸಿದ್ದೇವೆ. ಈ ಮಾತುಕತೆಯಿಂದ ಆ ದೇಶದವರೂ ಆಂತರಿಕ ಭಯೋತ್ಪಾದಕ ದಾಳಿಯಿಂದ ಬಳಲುತ್ತಿದ್ದಾರೆ ಎಂಬುದನ್ನು ನೆನಪಿಸಲು ಸಾಧ್ಯವಾಗುತ್ತದೆ ಎಂದು ಭಾವಿಸುತ್ತೇನೆ‘ ಎಂದರು.
‘ಅಮೆರಿಕದ ಪಡೆಗಳು ಆಫ್ಗನ್ ತೊರೆದ ನಂತರ ಚೀನಾವು ಶಾಂತಿಪಾಲನಾ ಪಡೆಯನ್ನು ಆಪ್ಗಾನಿಸ್ತಾನಕ್ಕೆ ಕಳುಹಿಸಲು ಯೋಚಿಸುತ್ತಿದೆಯಲ್ಲಾ‘ ಎಂದು ಕೇಳಿದಾಗ, ‘ನಾವು ಬೇರೆ ರಾಷ್ಟ್ರಗಳ ಬಗ್ಗೆ ಮಾತನಾಡುವುದಿಲ್ಲ ಮತ್ತು ನಾವು ಆಪ್ಗಾನಿಸ್ತಾನದ ಎಲ್ಲ ನೆರೆಹೊರೆಯ ರಾಷ್ಟ್ರದವರಿಗೂ, ಈ ದೇಶದ ಸಮಗ್ರತೆ ಮತ್ತು ಸಾರ್ವಭೌಮತ್ವವನ್ನು ಗೌರವಿಸುವಂತೆ ಕರೆ ನೀಡುತ್ತೇವೆ‘ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.