ADVERTISEMENT

ಕೋವಿಡ್‌ 19 | ಸಾವಿನ ಸಂಖ್ಯೆಯಲ್ಲಿ ಸ್ಪೇನ್‌ ಮೀರಿಸಿದ ಅಮೆರಿಕ

​ಪ್ರಜಾವಾಣಿ ವಾರ್ತೆ
Published 9 ಏಪ್ರಿಲ್ 2020, 3:02 IST
Last Updated 9 ಏಪ್ರಿಲ್ 2020, 3:02 IST
   
""

ವಾಷಿಂಗ್ಟನ್‌: ಅಮೆರಿಕದಲ್ಲಿ ಕೊರೊನಾ ವೈರಸ್‌ ಮರಣಮೃದಂಗ ಭಾರಿಸುತ್ತಿದ್ದು, ಸಾವಿನ ಸಂಖ್ಯೆಯಲ್ಲಿಗುರುವಾರ ಸ್ಪೇನ್‌ ಅನ್ನು ಮೀರಿಸಿದೆ.

ಅಮೆರಿಕದಲ್ಲಿ ಈ ವರೆಗೆ 435,128 ಮಂದಿಗೆ ಸೋಂಕು ತಗುಲಿದ್ದು, ನಿತ್ಯ ಸಾವಿರ ಸಂಖ್ಯೆಯಲ್ಲಿ ರೋಗಿಗಳು ಪ್ರಾಣ ಕೆಳದುಕೊಳ್ಳುತ್ತಿದ್ದಾರೆ. ಸದ್ಯದಲ್ಲಿ ಕೊರೊನಾ ಸೋಂಕಿನಿಂದಾಗಿ 14,795 ಮಂದಿ ಮೃತಪಟ್ಟಿದ್ದು, ಇದು ಸ್ಪೇನ್‌ಗಿಂತಲೂ ಅಧಿಕ. ಸ್ಪೇನ್‌ನಲ್ಲಿ 148,220 ಮಂದಿ ಸೋಂಕಿತರಿದ್ದು14,792ಮಂದಿ ಮೃತಪಟ್ಟಿದ್ಧಾರೆ.

ನ್ಯೂಯಾರ್ಕ್‌ ನಗರವೊಂದರಲ್ಲೇ 151,171 ಸೋಂಕಿತರಿದ್ದು, 6,268 ಮಂದಿ ಸಾವಿಗೀಡಾಗಿದ್ದಾರೆ.

ಇದೇ ವೇಳೆ ಅಮೆರಿಕಾದ ವಾಷಿಂಗ್ಟನ್‌‌ನಲ್ಲಿ ಮಾರಣಾಂತಿಕ ಕೊರೊನಾಗೆ 11ಮಂದಿ ಭಾರತೀಯರು ಸಾವನ್ನಪ್ಪಿದ್ದು, 16 ಮಂದಿಗೆ ಸೋಂಕು ತಗುಲಿರುವುದು ದೃಢಪಟ್ಟಿದೆ.

ಮೃತಪಟ್ಟವರಲ್ಲಿ ಭಾರತೀಯರಾಗಿದ್ದು ಪುರುಷರು ಎಂದು ಗೊತ್ತಾಗಿದೆ. ಅವರಲ್ಲಿ ಹತ್ತು ಮಂದಿ ನ್ಯೂಯಾರ್ಕ್ ಮತ್ತು ನ್ಯೂಜೆರ್ಸಿಯಲ್ಲಿ ವಾಸವಿದ್ದವರು. ಇವರಲ್ಲಿ ನಾಲ್ಕು ಮಂದಿ ನ್ಯೂಯಾರ್ಕ್ ನಗರದಲ್ಲಿ ಚಾಲಕರಾಗಿ ಕೆಲಸ ಮಾಡುತ್ತಿದ್ದರು. ಕೊರೊನಾ ಸೋಂಕು ಹರಡುವುದನ್ನುತಡೆಗಟ್ಟುವ ಸಲುವಾಗಿ ಕಟ್ಟುನಿಟ್ಟಿನ ಕ್ರಮಗಳನ್ನು ಜಾರಿಗೊಳಿಸಿದ್ದು, ಕೆಲವು ಸಂದರ್ಭಗಳಲ್ಲಿ ಮೃತರ ಶವಸಂಸ್ಕಾರಕ್ಕೂ ಸಂಬಂಧಿಕರು ಪಾಲ್ಗೊಳ್ಳುವುದನ್ನು ನಿರ್ಬಂಧಿಸಿದ್ದು ಸ್ಥಳೀಯ ಅಧಿಕಾರಿಗಳೇ ಶವಸಂಸ್ಕಾರ ನೆರವೇರಿಸುತ್ತಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.