ADVERTISEMENT

ಮೋದಿ ರಷ್ಯಾ ಭೇಟಿ | ಅಮೆರಿಕಕ್ಕೆ ನಿರಾಸೆ: ವಿದೇಶಾಂಗ ಇಲಾಖೆಯ ಅಧಿಕಾರಿ

ಪಿಟಿಐ
Published 25 ಜುಲೈ 2024, 15:30 IST
Last Updated 25 ಜುಲೈ 2024, 15:30 IST
<div class="paragraphs"><p>ಮೋದಿ </p></div>

ಮೋದಿ

   

ವಾಷಿಂಗ್ಟನ್‌: ‘ಪ್ರಧಾನಿ ನರೇಂದ್ರ ಮೋದಿ ಅವರು ರಷ್ಯಾ ಪ್ರವಾಸ ಕೈಗೊಂಡ ಸಮಯ ಮತ್ತು ಸಂದರ್ಭವು ಅಮೆರಿಕವನ್ನು ನಿರಾಶೆಗೊಳಿಸಿದೆ’ ಎಂದು ವಿದೇಶಾಂಗ ಇಲಾಖೆಯ ಹಿರಿಯ ಅಧಿಕಾರಿಯೊಬ್ಬರು ಹೇಳಿದ್ದಾರೆ.

ಇಲ್ಲಿ ನ್ಯಾಟೊ ಶೃಂಗಸಭೆಯನ್ನು ಆಯೋಜಿಸಿದ್ದ ಸಮಯದಲ್ಲಿ ಮೋದಿ ಅವರು ಕೈಗೊಂಡ ರಷ್ಯಾ ಭೇಟಿ ಬಗ್ಗೆ ಅಮೆರಿಕವು ನಿರಾಶೆಗೊಂಡಿದೆ ಎಂದು ವಿದೇಶಾಂಗ ಇಲಾಖೆಯ ಹಿರಿಯ ಅಧಿಕಾರಿಯೊಬ್ಬರು ಸಂಸದರಿಗೆ ಹೇಳಿದ್ದಾರೆ. ಅಲ್ಲದೆ, ಭಾರತ-ರಷ್ಯಾ ಸಂಬಂಧ ಬಲಗೊಳ್ಳುತ್ತಿರುವ ಬಗ್ಗೆಯೂ ಅವರು ಕಳವಳ ವ್ಯಕ್ತಪಡಿಸಿದ್ದಾರೆ.

ADVERTISEMENT

‘ಪ್ರಧಾನಿ ಮೋದಿ ಅವರ ಮಾಸ್ಕೊ ಪ್ರವಾಸದ ಭೇಟಿಯ ಹಿಂದಿನ ಉದ್ದೇಶ ಮತ್ತು ಸಮಯದ ಬಗ್ಗೆ ನಮಗೆ ಆಗಿರುವ ನಿರಾಶೆಯ ಕುರಿತು ನಿಮ್ಮೊಂದಿಗೆ ಹೆಚ್ಚು ಹೇಳಲು ಸಾಧ್ಯವಿಲ್ಲ’ ಎಂದು ವಿದೇಶಾಂಗ ಇಲಾಖೆಯ ದಕ್ಷಿಣ ಮತ್ತು ಮಧ್ಯ ಏಷ್ಯಾದ ಸಹಾಯಕ ಕಾರ್ಯದರ್ಶಿ ಡೊನಾಲ್ಡ್ ಲು ಮಂಗಳವಾರ ಇಲ್ಲಿ ಸಂಸದರಿಗೆ ತಿಳಿಸಿದ್ದಾರೆ.

‘ಪ್ರಧಾನಿ ಮೋದಿ ಅವರು ಮಾಸ್ಕೊಗೆ ತೆರಳುವ ಎರಡು ವಾರಗಳ ಮುನ್ನ ಇಟಲಿಯಲ್ಲಿ ನಡೆದ ಜಿ7 ಶೃಂಗಸಭೆಯ ವೇಳೆ ಉಕ್ರೇನ್‌ ಅಧ್ಯಕ್ಷ ಝೆಲೆನ್‌ಸ್ಕಿ ಅವರನ್ನು ಭೇಟಿಯಾಗಿದ್ದನ್ನು ನೀವು ನೋಡಿದ್ದೀರಿ’ ಎಂದು ಲು ಹೇಳಿದರು.

‘ಆ ಬಳಿಕ, ಮೋದಿ ಅವರು ಮಾಸ್ಕೊದಲ್ಲಿದ್ದಾಗ ಏನು ಮಾಡಿದರು ಎಂಬುದನ್ನು ನಾವು ಬಹಳ ಸೂಕ್ಷ್ಮವಾಗಿ ಗಮನಿಸಿದ್ದೆವು. ಅಲ್ಲಿ ಯಾವುದೇ ಹೊಸ ಪ್ರಮುಖ ರಕ್ಷಣಾ ಒಪ್ಪಂದಗಳು ನಡೆಯಲಿಲ್ಲ. ತಂತ್ರಜ್ಞಾನ ಸಹಕಾರದ ಕುರಿತು ಯಾವುದೇ ಪ್ರಮುಖ ಚರ್ಚೆ ಆಗಿದ್ದನ್ನು ನಾವು ನೋಡಿಲ್ಲ. ಜೊತೆಗೆ, ಮೋದಿ ಅವರು ಉಕ್ರೇನ್ ಯುದ್ಧದ ಬಗ್ಗೆ ಪುಟಿನ್‌ ಸಮ್ಮುಖದಲ್ಲೇ ಭಾಷಣದಲ್ಲಿ ತಮ್ಮ ಭಾವನೆ ಹಂಚಿಕೊಂಡಿದ್ದಾರೆ. ಯುದ್ಧಭೂಮಿಯಲ್ಲಿ ಗೆಲ್ಲಲು ಸಾಧ್ಯವಿಲ್ಲ ಎನ್ನುವ ಮಾತನ್ನು ಹೇಳಿದ್ದಾರೆ. ಯುದ್ಧದಲ್ಲಿ ಮಕ್ಕಳ ಸಾವನ್ನು ನೋಡಿ ಅವರು ಅನುಭವಿಸಿದ ನೋವನ್ನು ವ್ಯಕ್ತಪಡಿಸಿದ್ದಾರೆ’ ಎಂದು ಲು ಹೇಳಿದ್ದಾರೆ.

‘ಈ ಭೇಟಿಯ ಬಗ್ಗೆ ನಿಮಗೆ ಆಗಿರುವ ಕಳವಳವನ್ನು ಭಾರತದ ಜತೆ ಹಂಚಿಕೊಳ್ಳಲು ನಾವು ತುಂಬಾ ಶ್ರಮಿಸುತ್ತಿದ್ದೇವೆ’ ಎಂದು ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.