ADVERTISEMENT

ಭಾರತ ನೀಡಿದ ಉಡುಗೊರೆಗಳ ಪಟ್ಟಿ ಪ್ರಕಟಿಸಿದಅಮೆರಿಕ ವಿದೇಶಾಂಗ ಇಲಾಖೆ

ಪಿಟಿಐ
Published 30 ಜನವರಿ 2026, 16:12 IST
Last Updated 30 ಜನವರಿ 2026, 16:12 IST
<div class="paragraphs"><p>ಸಾಂದರ್ಭಿಕ ಚಿತ್ರ</p></div>

ಸಾಂದರ್ಭಿಕ ಚಿತ್ರ

   

ನ್ಯೂಯಾರ್ಕ್‌: ಮಾಜಿ ಅಧ್ಯಕ್ಷ ಜೋ ಬೈಡನ್‌ ಸೇರಿದಂತೆ ಅಲ್ಲಿನ ಮುಖಂಡರಿಗೆ ಭಾರತವು ನೀಡಿದ ಉಡುಗೊರೆಗಳ ಪಟ್ಟಿಯನ್ನು ಅಮೆರಿಕ ವಿದೇಶಾಂಗ ಇಲಾಖೆ ಬಿಡುಗಡೆ ಮಾಡಿದೆ.

‘ವಿದೇಶಿ ಸರ್ಕಾರಿ ಮೂಲಗಳಿಂದ 2024ರಲ್ಲಿ ಪಡೆದ ಉಡುಗೊರೆಗಳ’ ಸಮಗ್ರ ಪಟ್ಟಿಯನ್ನು ವಿದೇಶಾಂಗ ಇಲಾಖೆಯ ಶಿಷ್ಟಾಚಾರ ಮುಖ್ಯಸ್ಥರ ಕಚೇರಿಯು ಸಲ್ಲಿಸಿದ್ದು, ಯಾವ್ಯಾವ ಉಡುಗೊರೆ ಸ್ವೀಕರಿಸಲಾಗಿದೆ ಹಾಗೂ ಅವುಗಳ ಮೌಲ್ಯ ಎಷ್ಟೆಂದು ನಮೂದಿಸಿರುವ ವರದಿ ಇದಾಗಿದೆ.

ADVERTISEMENT

ಮರದ ಕಪಾಟು, ಸ್ಕಾರ್ಫ್‌, ಕೇಸರಿ ತುಂಬಿದ ಜಾರ್, ಚಹಾ ತುಂಬಿದ ಮರದ ಪೆಟ್ಟಿಗೆಯನ್ನು ಮೋದಿ ಅವರು 2023ರ ಸೆ.10ರಂದು ಬೈಡನ್ ಅವರಿಗೆ ಕೊಡುಗೆಯಾಗಿ ನೀಡಿದ್ದು, ಇವುಗಳ ಮೌಲ್ಯ 51,667.

ಭಾರತ ಆಯೋಜಿಸಿದ್ದ ಜಿ 20 ನಾಯಕರ ಸಭೆಗಾಗಿ 2023ರ ಸೆಪ್ಟೆಂಬರ್‌ನಲ್ಲಿ ಭಾರತಕ್ಕೆ ಬಂದಿದ್ದ ಜೋ ಬೈಡನ್ ಅವರಿಗೆ ಮೋದಿ ಅವರು ₹7.13 ಲಕ್ಷ ಮೌಲ್ಯದ ‘ಸ್ಟೆರ್ಲಿಂಗ್‌ ಸಿಲ್ವರ್‌ ಮೆಟಲ್‌ ಟ್ರೈನ್‌ ಸೆಟ್‌’ ಕೊಡುಗೆಯಾಗಿ ನೀಡಿದ್ದಾರೆ.

ಅಮೆರಿಕದ ಆಗಿನ ಪ್ರಥಮ ಮಹಿಳೆ ಜಿಲ್ ಬೈಡನ್‌ ಅವರಿಗೆ ₹2.73 ಲಕ್ಷದ ಪಶ್ಮಿನಾ ಶಾಲನ್ನು ಮೋದಿ ಅವರು 2024ರ ಅ.21ರಂದು ಉಡುಗೊರೆಯಾಗಿ ಕೊಟ್ಟಿದ್ದಾರೆ. 

ಉಪಾಧ್ಯಕ್ಷೆ ಕಮಲಾ ಹ್ಯಾರಿಸ್‌ ಅವರಿಗೆ 2024ರ ಅ.18ರಂದು ₹1.22 ಸಾವಿರ ಮೌಲ್ಯದ ಲಾರ್ಡ್‌ ಕೃಷ್ಣ ರಾಸಲೀಲಾ ಸಿಲ್ವರ್‌ ಬಾಕ್ಸ್‌ ಹಾಗೂ ಅವರ ಪತಿಗೆ ₹54 ಸಾವಿರ ಮೊತ್ತದ ಕಂಫ್ಲಿಕ್ಸ್‌ ಅನ್ನು ಮೋದಿ ನೀಡಿದ್ದಾರೆ.

ರಕ್ಷಣಾ ಸಚಿವ ರಾಜನಾಥ ಸಿಂಗ್ ಅವರು ಅಮೆರಿಕದ ರಕ್ಷಣಾ ಕಾರ್ಯದರ್ಶಿ ಲಾಯ್ಡ್ ಆಸ್ಟಿನ್‌ ಅವರಿಗೆ ₹3.40 ಲಕ್ಷ ಮೌಲ್ಯದ ನಟರಾಜನ ಕಂಚಿನ ಪ್ರತಿಮೆಯನ್ನು ಉಡುಗೊರೆಯಾಗಿ ಕೊಟ್ಟಿದ್ದಾರೆ ಎಂಬುದು ವರದಿಯಲ್ಲಿ ಉಲ್ಲೇಖವಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.