ADVERTISEMENT

ಧಾರ್ಮಿಕ ಸ್ವಾತಂತ್ರ್ಯ ದಮನ: ಚೀನಾದ ವಿರುದ್ಧ ಅಮೆರಿಕ ವಾಗ್ದಾಳಿ

ಏಜೆನ್ಸೀಸ್
Published 13 ಮೇ 2021, 6:39 IST
Last Updated 13 ಮೇ 2021, 6:39 IST
ಆಂಟನಿ ಬ್ಲಿಂಕೆನ್
ಆಂಟನಿ ಬ್ಲಿಂಕೆನ್   

ವಾಷಿಂಗ್ಟನ್: ಅಮೆರಿಕವು ತನ್ನ ವಿದೇಶಾಂಗ ನೀತಿಯ ಪ್ರಾಥಮಿಕ ಕೇಂದ್ರವಾದ ಮಾನವ ಹಕ್ಕುಗಳನ್ನು ಪುನಃಸ್ಥಾಪಿಸುವ ಉದ್ದೇಶದಿಂದ ಮುಂದೆ ಸಾಗುತ್ತಿರುವಾಗ, ಚೀನಾ ಮತ್ತು ಇತರ ಕೆಲ ದೇಶಗಳು ಜನರ ಧಾರ್ಮಿಕ ಸ್ವಾತಂತ್ರ್ಯವನ್ನು ದಮನಿಸುತ್ತಿವೆ ಎಂದು ಅಮೆರಿಕ ದೂರಿದೆ.

ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ಆಂಟನಿ ಬ್ಲಿಂಕೆನ್ ಅವರು ಇಲಾಖೆಯ ಅಂತರರಾಷ್ಟ್ರೀಯ ಧಾರ್ಮಿಕ ಸ್ವಾತಂತ್ರ್ಯದ ವಾರ್ಷಿಕ ವರದಿ ಬಿಡುಗಡೆ ಮಾಡಿ, ಚೀನಾ ವಿರುದ್ಧ ವಾಗ್ದಾಳಿ ನಡೆಸಿದರು.

ಚೀನಾ ತನ್ನ ನಾಗರಿಕರಿಗೆ ಮುಕ್ತವಾಗಿ ಪೂಜಿಸುವ ಸ್ವಾತಂತ್ರ್ಯ ನೀಡದೆ ತೀವ್ರವಾದ ನಿರ್ಬಂಧಗಳನ್ನು ವಿಧಿಸಿದೆ. ಚೀನಾವು ಜನರ ಧಾರ್ಮಿಕ ಸ್ವಾತಂತ್ರ್ಯವನ್ನು ಹತ್ತಿಕ್ಕುತ್ತಿದೆ. ಮುಸ್ಲಿಂ ಉಯಿಘರ್, ಇತರ ಧಾರ್ಮಿಕ ಮತ್ತು ಜನಾಂಗೀಯ ಅಲ್ಪಸಂಖ್ಯಾತ ಗುಂಪುಗಳ ಸದಸ್ಯರ ವಿರುದ್ಧ ನರಮೇಧ ಕೃತ್ಯಗಳನ್ನು ನಡೆಸುವ ಮೂಲಕ ಅಪರಾಧಗಳನ್ನು ಮುಂದುವರೆಸಿದೆ ಎಂದು 2020ರ ವರದಿ ಬಿಡುಗಡೆಗೊಳಿಸಿದ ಬ್ಲಿಂಕೆನ್‌ ಸುದ್ದಿಗಾರರಿಗೆ ತಿಳಿಸಿದರು.

ADVERTISEMENT

ಚೀನಾದಲ್ಲಿ ಕ್ರಿಶ್ಚಿಯನ್ನರು, ಮುಸ್ಲಿಮರು, ಟಿಬೆಟಿಯನ್ ಬೌದ್ಧರು ಮತ್ತು ಫಾಲುನ್ ಗಾಂಗ್ ವೃತ್ತಿಗಾರರು ‘ಉದ್ಯೋಗ, ವಸತಿ ಮತ್ತು ವ್ಯಾಪಾರದ ಅವಕಾಶಗಳಲ್ಲಿ ತೀವ್ರವಾದ ಸಾಮಾಜಿಕ ತಾರತಮ್ಯ ಎದುರಿಸುತ್ತಿದ್ದಾರೆ‌’ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.

ಇರಾನ್, ಮ್ಯಾನ್ಮಾರ್, ರಷ್ಯಾದಲ್ಲಿನ ಧಾರ್ಮಿಕ ಸ್ವಾತಂತ್ರ್ಯದ ದುರುಪಯೋಗದ ಬಗ್ಗೆಯೂ ಬ್ಲಿಂಕೆನ್ ವಾಗ್ದಾಳಿ ನಡೆಸಿದರು. ನೈಜೀರಿಯಾ ಮತ್ತು ಸೌದಿ ಅರೇಬಿಯಾವನ್ನೂ ಅಪರಾಧಿಗಳು ಎಂದು ವರದಿಯಲ್ಲಿ ಗುರುತಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.