ADVERTISEMENT

ಭಾರತ ಸುಂಕ ಇಳಿಸಲಿ, ಇಲ್ಲವೇ ಸಂಕಷ್ಟ ಎದುರಿಸಲಿ: ಅಮೆರಿಕ

ಪಿಟಿಐ
Published 14 ಸೆಪ್ಟೆಂಬರ್ 2025, 18:34 IST
Last Updated 14 ಸೆಪ್ಟೆಂಬರ್ 2025, 18:34 IST
<div class="paragraphs"><p>ಅಮೆರಿಕ-ಭಾರತ </p></div>

ಅಮೆರಿಕ-ಭಾರತ

   

(ಐಸ್ಟೋಕ್ ಸಾಂದರ್ಭಿಕ ಚಿತ್ರ)

ನ್ಯೂಯಾರ್ಕ್‌/ವಾಷಿಂಗ್ಟನ್‌: ಭಾರತವು ತನ್ನ ಸುಂಕವನ್ನು ಇಳಿಸಲಿ ಅಥವಾ ಅಮೆರಿಕದ ಜೊತೆಗಿನ ವ್ಯಾಪಾರದಲ್ಲಿ ಸಂಕಷ್ಟ ಎದುರಿಸಲಿ ಎಂದು ಅಮೆರಿಕ ವಾಣಿಜ್ಯ ಕಾರ್ಯದರ್ಶಿ ಹೊವರ್ಡ್ ಲುಟ್ನಿಕ್ ಶನಿವಾರ ಹೇಳಿದ್ದಾರೆ. ಭಾರತ, ಕೆನಡಾ ಮತ್ತು ಬ್ರೆಜಿಲ್‌ನಂತಹ ಪ್ರಮುಖ ಮಿತ್ರರಾಷ್ಟ್ರಗಳ ಮೇಲೆ ಅಮೆರಿಕ ಸುಂಕ ಹೇರಿ ಅವುಗಳ ಜೊತೆಗಿನ ಮೌಲ್ಯಯುತ ಸಂಬಂಧವನ್ನು ತಪ್ಪಾಗಿ ನಿರ್ವಹಿಸುತ್ತಿದೆಯೇ ಎಂಬ ಪ್ರಶ್ನೆಗೆ ಉತ್ತರಿಸುತ್ತಾ ಅವರು ಈ ಹೇಳಿಕೆ ನೀಡಿದ್ದಾರೆ.

ADVERTISEMENT

‘ಈ ಸಂಬಂಧವು ಒಂದು ಮಾರ್ಗ ಮಾತ್ರವಾಗಿದ್ದು, ಅದರಿಂದ ಅವರು ಅಮೆರಿಕದೊಂದಿಗೆ ವ್ಯವಹಾರ ಮಾಡಿ ಲಾಭ ಪಡೆದುಕೊಳ್ಳುತ್ತಾರೆ. ಆದರೆ ಅವರ ಆರ್ಥಿಕತೆಗೆ ನಮ್ಮನ್ನು ನಿರ್ಬಂಧಿಸುತ್ತಾರೆ. ಅಧ್ಯಕ್ಷ ಟ್ರಂಪ್ ಅವರು ನ್ಯಾಯಯುತ ಮತ್ತು ಪರಸ್ಪರ ವ್ಯಾಪಾರ ನಡೆಯಬೇಕು ಎಂದು ಹೇಳುತ್ತಾರೆ’ ಎಂದು ಲುಟ್ನಿಕ್ ಹೇಳಿದ್ದಾರೆ.

‘ಭಾರತವು 140 ಕೋಟಿ ಜನರನ್ನು ಹೊಂದಿರುವುದಾಗಿ ಬಡಾಯಿ ಕೊಚ್ಚಿಕೊಳ್ಳುತ್ತದೆ. ಆದರೆ ಈ 140 ಕೋಟಿ ಜನರು ಒಂದು ಚೀಲ ಅಮೆರಿಕದ ಕಾರ್ನ್‌ ಅನ್ನು ಕೂಡ ಯಾಕೆ ಖರೀದಿ ಮಾಡುವುದಿಲ್ಲ? ಅವರು ಎಲ್ಲವನ್ನೂ ನಮಗೆ ಮಾರುತ್ತಾರೆ ಮತ್ತು ನಮ್ಮ ಕಾರ್ನ್ ಅನ್ನು ಅವರು ಖರೀದಿ ಮಾಡುವುದಿಲ್ಲ ಎಂಬುದು ನಿಮಗೆ ತಪ್ಪು ಎಂದು ಅನ್ನಿಸುವುದಿಲ್ಲವೆ. ಅವರು ಎಲ್ಲಕ್ಕೂ ಸುಂಕ ವಿಧಿಸುತ್ತಾರೆ’ ಎಂದು ಲುಟ್ನಿಕ್ ಹೇಳಿದ್ದಾರೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.