ADVERTISEMENT

ಯಹೂದಿ ಪಂಡಿತನ ಟೋಪಿ ತೆಗೆಸಿದ ಸೌದಿ ಅಧಿಕಾರಿಗಳು

ಏಜೆನ್ಸೀಸ್
Published 13 ಮಾರ್ಚ್ 2024, 14:12 IST
Last Updated 13 ಮಾರ್ಚ್ 2024, 14:12 IST
ಕಿಪ್ಪಾ
ಕಿಪ್ಪಾ   

ದುಬೈ: ಸತ್ಯಶೋಧನಾ ಅಭಿಯಾನದ ಅಂಗವಾಗಿ ಸೌದಿ ಅರೇಬಿಯಾಕ್ಕೆ ತೆರಳಿದ್ದ ಅಮೆರಿಕದ ಧಾರ್ಮಿಕ ಸ್ವಾತಂತ್ರ್ಯ ಆಯೋಗದ ನಿಯೋಗದಲ್ಲಿದ್ದ ಯಹೂದಿ ಪಂಡಿತರೊಬ್ಬರಿಗೆ ಸಾರ್ವಜನಿಕವಾಗಿ ಟೋಪಿ (ಕಿಪ್ಪಾ) ಧರಿಸದಂತೆ ಅಧಿಕಾರಿಗಳು ಆದೇಶಿಸಿದ ಕಾರಣ ನಿಯೋಗವು ಪ್ರವಾಸವನ್ನು ಅರ್ಧದಲ್ಲೇ ಮೊಟಕುಗೊಳಿಸಿದೆ. 

ಅಧಿಕಾರಿಗಳ ಈ ಕ್ರಮವು ಸೌದಿ ರಾಜ ಮೊಹಮ್ಮದ್‌ ಬಿನ್‌ ಸಲ್ಮಾನ್‌ ಅವರು ತಮ್ಮ ಆಡಳಿತದಲ್ಲಿ ಸಾಧಿಸಿರುವ ಪ್ರಗತಿಯನ್ನು ಸೂಚಿಸುತ್ತಿದೆಯೇ ಎಂದು ಯಹೂದಿ ಪಂಡಿತ ಅಬ್ರಹಾಂ ಕೂಪರ್‌ ಪ್ರಶ್ನಿಸಿದ್ದಾರೆ.

ಸೌದಿ ಅರೇಬಿಯಾದ ಪರಿಸ್ಥಿತಿ ಸಂಕೀರ್ಣವಾಗಿದೆ ಎಂದು ನಿಯೋಗದಲ್ಲಿದ್ದ ನ್ಯೂಯಾರ್ಕ್‌ ಸಿಟಿಯ ರೆವರೆಂಡ್ ಫ್ರೆಡೆರಿಕ್ ಡೇವಿ ಹೇಳಿದರು.

ADVERTISEMENT

ಟೋಪಿ ತೆಗೆಯಲು ಆದೇಶಿಸಿರುವುದು ದುರದೃಷ್ಟಕರ. ತಪ್ಪುಗ್ರಹಿಕೆಯಿಂದ ಈ ರೀತಿ ಮಾಡಲಾಗಿದೆ ಎಂದು ಸೌದಿ ಅರೇಬಿಯಾದ ರಾಯಭಾರ ಕಚೇರಿಯು ಆನ್‌ಲೈನ್‌ ಪ್ರಕಟಣೆಯಲ್ಲಿ ಹೇಳಿದೆ

ಸೌದಿ ಅರೇಬಿಯಾದ ಮಣ್ಣಿನ ಗೋಡೆಗಳ ಗ್ರಾಮ ದಿರಿಯಾಕ್ಕೆ ನಿಯೋಗವು ಭೇಟಿ ನೀಡಿದ್ದ ವೇಳೆ ಅಧಿಕಾರಿಗಳು ಟೋಪಿ ತೆಗೆಯುವಂತೆ ಅಬ್ರಹಾಂ ಕೂಪರ್‌ಗೆ ಸೂಚಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.