ADVERTISEMENT

ಬಬ್ಬರ್‌ ಖಾಲ್ಸಾಗೆ ಪ್ರತೇಕವಾದಿ ಹಣೆಪಟ್ಟಿ

ಪಿಟಿಐ
Published 5 ಅಕ್ಟೋಬರ್ 2018, 16:37 IST
Last Updated 5 ಅಕ್ಟೋಬರ್ 2018, 16:37 IST

ವಾಷಿಂಗ್ಟನ್‌: ಪ್ರತ್ಯೇಕವಾದಿ ಚಳವಳಿಗಳ ಮೂಲಕ ದೇಶದ ಹಿತಾಸಕ್ತಿಗೆ ಬೆದರಿಕೆಯೊಡ್ಡುತ್ತಿರುವ ಸಂಘನೆಗಳ ಪಟ್ಟಿಗೆ ಸಿಖ್‌ ಭಯೋತ್ಪಾದಕ ಸಂಘಟನೆ ಬಬ್ಬರ್‌ ಖಾಲ್ಸಾವನ್ನು ಅಮೆರಿಕ ಸೇರಿಸಿದೆ.

ಇಂತಹ ಸಂಘಟನೆಗಳು ಬಾಂಬ್‌ ದಾಳಿ ಮೊದಲಾದ ಭಯೋತ್ಪಾದಕ ಚಟುವಟಿಕೆಗಳನ್ನು ನಡೆಸುವ ಮೂಲಕ ಆರ್ಥಿಕ, ರಾಜಕೀಯ ಮತ್ತು ಸಾಮಾಜಿಕ ಹಿತಾಸಕ್ತಿಗಳ ಮೇಲೂ ಪರಿಣಾಮ ಬೀರುತ್ತಿವೆ ಎಂದಿದೆ.

ಬಬ್ಬರ್‌ ಖಾಲ್ಸಾ ಇಂಟರ್‌ನ್ಯಾಷನಲ್ ಸಂಘಟನೆಯು ಪ್ರತ್ಯೇಕ ಸ್ವತಂತ್ರ ರಾಜ್ಯ ರಚನೆಗಾಗಿ ಭಾರತದಲ್ಲಿ ಹಲವು ಭಯೋತ್ಪಾದಕ ದಾಳಿಗಳನ್ನು ನಡೆಸುವ ಮೂಲಕ ನಾಗರಿಕರ ಸಾವಿಗೆ ಕಾರಣವಾಗಿದೆ ಎಂದು ಶ್ವೇತಭವನ ಹೇಳಿದೆ. ಅಮೆರಿಕ, ಕೆನಡಾ ಮತ್ತು ಭಾರತದಲ್ಲಿ ಈ ಸಂಘಟನೆಯನ್ನು ನಿಷೇಧಿಸಿದೆ ಎಂದೂ ತಿಳಿಸಿದೆ.

ADVERTISEMENT

ಸಿಖ್‌ ಪ್ರತೇಕವಾದಿಗಳು ಅಮೆರಿಕವನ್ನು ತಮ್ಮ ಕಾರ್ಯಾಚರಣೆಯ ನೆಲೆಯನ್ನಾಗಿ ಬಳಸಿಕೊಳ್ಳುತ್ತಿರುವುದರ ಬಗ್ಗೆ ಭಾರತವು ಈಚೆಗೆ ಅಮೆರಿಕದ ಗಮನ ಸೆಳೆದಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.