ADVERTISEMENT

ಹೂಥಿ ಬಂಡುಕೋರರು ಉಡಾಯಿಸಿದ್ದ ಕ್ಷಿಪಣಿ ಹೊಡೆದುರುಳಿಸಿದ ಅಮೆರಿಕ

​ಪ್ರಜಾವಾಣಿ ವಾರ್ತೆ
Published 2 ಡಿಸೆಂಬರ್ 2024, 13:28 IST
Last Updated 2 ಡಿಸೆಂಬರ್ 2024, 13:28 IST
   

ದುಬೈ: ಯೆಮನ್‌ನ ಹೂಥಿ ಬಂಡುಕೋರರು ಯುದ್ಧನೌಕೆಗಳತ್ತ ಉಡಾಯಿಸಿದ್ದ ಏಳು ಕ್ಷಿಪಣಿಗಳು ಮತ್ತು ಡ್ರೋನ್‌ಗಳನ್ನು ಅಮೆರಿಕ ನೌಕಾಪಡೆಯು ಹೊಡೆದುರುಳಿಸಿದೆ. ಅಮೆರಿಕದ ಮೂರು ವ್ಯಾಪಾರ ಹಡಗುಗಳಿಗೆ  ಗಲ್ಫ್‌ ಆಫ್‌ ಆ್ಯಡೆನ್‌ ಉದ್ದಕ್ಕೂ ಕಾವಲು ನಿಯೋಜಿಸಲಾಗಿದೆ. ಘಟನೆಯಲ್ಲಿ ಯಾವುದೇ ಹಾನಿಯಾದ ಬಗ್ಗೆ ವರದಿಯಾಗಿಲ್ಲ.

‘ಮೂರು ಖಂಡಾಂತರ ಕ್ಷಿಪಣಿಗಳು ಮತ್ತು ಮೂರು ಡ್ರೋನ್‌ಗಳು ಮತ್ತು ಒಂದು ಕ್ರೂಸ್ ಕ್ಷಿಪಣಿಯನ್ನು ಭಾನುವಾರ ತಡರಾತ್ರಿ ಅಮೆರಿಕದ ಕ್ಷಿಪಣಿ ನಿರೋಧಕಗಳು ಹೊಡೆದುರುಳಿಸಿದವು’ ಎಂದು ಅಮೆರಿಕದ ಕೇಂದ್ರೀಯ ಕಮಾಂಡ್‌ ತಿಳಿಸಿದೆ.

ಹೂಥಿ ಬಂಡುಕೋರರು ಈ ದಾಳಿಯ ಹೊಣೆ ಹೊತ್ತುಕೊಂಡಿದ್ದು, ಅಮೆರಿಕದ ಕ್ಷಿಪಣಿ ನಿರೋಧಕಗಳು ಮತ್ತು ಅಮೆರಿಕದ ಸೇನೆಗೆ ಸೇರಿದ ಮೂರು ಹಡಗುಗಳನ್ನು ಗುರಿಯಾಗಿಸಿ ದಾಳಿ ನಡೆಸಲಾಗಿತ್ತು ಎಂದು ಹೇಳಿಕೆ ನೀಡಿದೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.