ADVERTISEMENT

ದಕ್ಷಿಣ ಕೊರಿಯಾ ಜೊತೆಗೂಡಿ ಅಣ್ವಸ್ತ್ರಗಳ ಪರೀಕ್ಷೆ ಇಲ್ಲ– ಬೈಡನ್

ಪಿಟಿಐ
Published 3 ಜನವರಿ 2023, 11:15 IST
Last Updated 3 ಜನವರಿ 2023, 11:15 IST
ಜೋ ಬೈಡನ್‌
ಜೋ ಬೈಡನ್‌   

ವಾಷಿಂಗ್ಟನ್‌: ದಕ್ಷಿಣ ಕೊರಿಯಾ ಜೊತೆಗೂಡಿ ಜಂಟಿಯಾಗಿ ಅಣ್ವಸ್ತ್ರ ಪರೀಕ್ಷೆ ನಡೆಸುವ ಸಾಧ್ಯತೆ ಕುರಿತಂತೆ ಉಭಯ ದೇಶಗಳ ನಡುವೆ ಚರ್ಚೆ ನಡೆದಿಲ್ಲ ಎಂದು ಅಮೆರಿಕ ಅಧ್ಯಕ್ಷ ಜೋ ಬೈಡನ್‌ ಹೇಳಿದ್ದಾರೆ.

ಶ್ವೇತಭವನದಲ್ಲಿ ಸೋಮವಾರ ನಡೆದ ಸುದ್ದಿಗೋಷ್ಠಿಯಲ್ಲಿ ಜಂಟಿಯಾಗಿ ಅಣ್ವಸ್ತ್ರ ಪರೀಕ್ಷೆಯನ್ನು ನಡೆಸುವ ಮಾತುಕತೆ ನಡೆದಿದೆಯೇ ಎಂಬ ಪ್ರಶ್ನೆಗೆ ಅವರು, ‘ಇಲ್ಲ’ ಎಂದು ಸ್ಪಷ್ಟವಾಗಿ ಹೇಳಿದರು.

ದಕ್ಷಿಣ ಕೊರಿಯಾ ಅಧ್ಯಕ್ಷ ಯೂನ್‌ ಸುಕ್‌ ಯೊಲ್‌ ಅವರ ಈ ಕುರಿತು ಇಟ್ಟಿದ್ದ ಪ್ರಸ್ತಾಪವನ್ನು ಬೈಡನ್‌ ನೇರ ಮಾತಿನ ಮೂಲಕ ಸ್ಪಷ್ಟವಾಗಿ ತಳ್ಳಿಹಾಕಿದರು.

ADVERTISEMENT

‘ಅಣ್ವಸ್ತ್ರಗಳು ಅಮೆರಿಕದ್ದಾಗಿವೆ. ಆದರೆ, ಯೋಜನೆ, ಪರೀಕ್ಷೆ, ತರಬೇತಿ ಕಾರ್ಯಗಳನ್ನು ಜಂಟಿಯಾಗಿ ದಕ್ಷಿಣ ಕೊರಿಯಾ– ಅಮೆರಿಕ ನಡೆಸಲಿದೆ‘ ಎಂದು ಯೂನ್‌ ಅವರು ಸ್ಥಳೀಯ ಪತ್ರಿಕೆಯ ಸಂದರ್ಶನದಲ್ಲಿ ಹೇಳಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.