ADVERTISEMENT

ಮ್ಯಾನ್ಮಾರ್‌ ದೇಶದಿಂದ ನಿರ್ಗಮಿಸುವಂತೆ ರಾಜತಾಂತ್ರಿಕರಿಗೆ ಅಮೆರಿಕ ಸೂಚನೆ

ಏಜೆನ್ಸೀಸ್
Published 31 ಮಾರ್ಚ್ 2021, 6:09 IST
Last Updated 31 ಮಾರ್ಚ್ 2021, 6:09 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಯಾಂಗೂನ್: ಮ್ಯಾನ್ಮಾರ್‌ನಲ್ಲಿ ಮಿಲಿಟರಿ ಆಡಳಿತದ ವಿರುದ್ಧ ನಡೆಯುತ್ತಿರುವ ಪ್ರತಿಭಟನೆಗಳು ಮತ್ತು ಹೆಚ್ಚುತ್ತಿರುವ ಹಿಂಸಾಚಾರದ ಹಿನ್ನೆಲೆಯಲ್ಲಿ ತುರ್ತು ಇಲ್ಲದ ರಾಜತಾಂತ್ರಿಕರು ನಿರ್ಗಮಿಸುವಂತೆಅಮೆರಿಕ ಸರ್ಕಾರ ಬುಧವಾರ ಆದೇಶಿಸಿದೆ.

ಮಿಲಿಟರಿ ನಡೆಸುತ್ತಿರುವ ಈ ಹಿಂಸಾಚಾರಕ್ಕೆ ಅಂತರರಾಷ್ಟ್ರೀಯ ಮಟ್ಟದಿಂದ ಖಂಡನೆ ವ್ಯಕ್ತವಾಗಿದೆ. ಹಿಂಸಾಚಾರ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ‘ತುರ್ತು ಅಥವಾ ಅನಿವಾರ್ಯವಲ್ಲದ ಅಮೆರಿಕದ ಎಲ್ಲ ಸರ್ಕಾರಿ ನೌಕರರು ಮತ್ತು ಕುಟುಂಬದ ಸದಸ್ಯರು, ಮ್ಯಾನ್ಯಾರ್‌ನಿಂದ ನಿರ್ಗಮಿಸಿ’ ಎಂದು ಅಮೆರಿಕ ಸರ್ಕಾರ ಸೂಚಿಸಿದೆ.

ಮ್ಯಾನ್ಮಾರ್‌ನಲ್ಲಿ ಮಿಲಿಟರಿ ಆಡಳಿತವನ್ನು ಕೊನೆಗೊಳಿಸಿ, ಚುನಾಯಿತ ಸರ್ಕಾರವನ್ನು ಪುನರ್ ಸ್ಥಾಪನೆಗಾಗಿ ಪ್ರತಿಭಟನೆ ನಡೆಸುತ್ತಿರುವ ಜನರ ಮೇಲೆ ಸೇನಾ ಪಡೆಗಳು ಹಿಂಸಾಚಾರ ನಡೆಸುತ್ತಿವೆ. ಫೆ.1 ರಿಂದ ನಡೆಯುತ್ತಿರುವ ಈ ಹಿಂಸಾಚಾರದಲ್ಲಿ ಇಲ್ಲಿವರೆಗೆ 520 ಮಂದಿ ನಾಗರಿಕರು ಸಾವನ್ನಪ್ಪಿದ್ದಾರೆ.

ADVERTISEMENT

ಹೊಸದಾಗಿ ವಾಯುದಾಳಿ: ಮ್ಯಾನ್ಮಾರ್‌ನ ಪೂರ್ವ ಭಾಗದಲ್ಲಿ ಸೇನಾಡಳಿತವು ವಾಯುದಾಳಿ ಹೆಚ್ಚಿಸಿದೆ. ಇದರಿಂದ ಸಾವಿರಾರು ಮಂದಿ ಕರೆನ್‌ ಜನಾಂಗದವರು ತಮ್ಮ ದೇಶಕ್ಕೆ ವಲಸೆ ಬರುವಂತೆ ಮಾಡಿದೆ ಎಂದು ಥಾಯ್ಲೆಂಡ್‌ ಹೇಳಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.