ADVERTISEMENT

ಉಕ್ರೇನ್‌ಗೆ ದಿಢೀರ್‌ ಭೇಟಿ ನೀಡಿದ ಅಮೆರಿಕ ಅಧ್ಯಕ್ಷ ಜೋ ಬೈಡನ್‌

ರಾಯಿಟರ್ಸ್
Published 20 ಫೆಬ್ರುವರಿ 2023, 19:30 IST
Last Updated 20 ಫೆಬ್ರುವರಿ 2023, 19:30 IST
ಉಕ್ರೇನ್‌ನ ರಾಜಧಾನಿ ಕೀವ್‌ಗೆ ಸೋಮವಾರ ಆಗಮಿಸಿದ ಅಮೆರಿಕ ಅಧ್ಯಕ್ಷ ಜೋ ಬೈಡನ್‌ ಅವರನ್ನು ಉಕ್ರೇನ್‌ ಅಧ್ಯಕ್ಷ ವೊಲೊಡಿಮಿರ್‌ ಝೆಲೆನ್‌ಸ್ಕಿ ಅವರು ಆಲಂಗಿಸಿ ಸ್ವಾಗತಿಸಿದರು –ಎಎಫ್‌ಪಿ ಚಿತ್ರ
ಉಕ್ರೇನ್‌ನ ರಾಜಧಾನಿ ಕೀವ್‌ಗೆ ಸೋಮವಾರ ಆಗಮಿಸಿದ ಅಮೆರಿಕ ಅಧ್ಯಕ್ಷ ಜೋ ಬೈಡನ್‌ ಅವರನ್ನು ಉಕ್ರೇನ್‌ ಅಧ್ಯಕ್ಷ ವೊಲೊಡಿಮಿರ್‌ ಝೆಲೆನ್‌ಸ್ಕಿ ಅವರು ಆಲಂಗಿಸಿ ಸ್ವಾಗತಿಸಿದರು –ಎಎಫ್‌ಪಿ ಚಿತ್ರ   

ಕೀವ್: ಅಮೆರಿಕ ಅಧ್ಯಕ್ಷ ಜೋ ಬೈಡನ್‌ ಸೋಮವಾರ ಉಕ್ರೇನ್‌ ರಾಜಧಾನಿ ಕೀವ್‌ಗೆ ಅಘೋಷಿತ ಭೇಟಿ ನೀಡಿದರು. ರಷ್ಯಾವು ಉಕ್ರೇನ್‌ ಮೇಲೆ ಸೇನಾ ಕಾರ್ಯಾಚರಣೆ ಆರಂಭಿಸಿ ಒಂದು ವರ್ಷ ಪೂರ್ಣಗೊಳ್ಳಲು ಮೂರು ದಿನ ಬಾಕಿ ಇರುವಾಗಲೇ ಈ ಭೇಟಿ ಮಾಡಿ ದೇಶದ ಜನತೆಗೆ ಧೈರ್ಯ ತುಂಬಲಾಯಿತು.

ಉಕ್ರೇನ್‌ ಅಧ್ಯಕ್ಷ ವೊಲೊಡಿಮಿರ್‌ ಝೆಲೆನ್‌ಸ್ಕಿ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಿದ ಬೈಡನ್‌, ಹೆಚ್ಚುವರಿ 50 ಕೋಟಿ ಡಾಲರ್‌ (₹413 ಕೋಟಿ) ನೆರವು ನೀಡುವುದಾಗಿ ಘೋಷಿಸಿದರು.

‘ಉಕ್ರೇನ್‌ ಮತ್ತು ಪ್ರಜಾಪ್ರಭುತ್ವ ಗಟ್ಟಿಯಾಗಿ ನಿಂತಿವೆ. ಅಮೆರಿಕ ಹಾಗೂ ಇಡೀ ಜಗತ್ತು ಉಕ್ರೇನ್‌ ಪರವಾಗಿದೆ’ ಎಂದು ಬೈಡನ್ ಹೇಳಿದರು.

ADVERTISEMENT

ಉಭಯ ದೇಶಗಳ ನಡುವೆ ಯುದ್ಧವು ತೀವ್ರಗೊಳ್ಳುತ್ತಿದ್ದು, ಪಾಶ್ಚಿಮಾತ್ಯ ದೇಶಗಳು ವೇಗವಾಗಿ ಶಸ್ತ್ರಾಸ್ತ್ರ ಮತ್ತು ಯುದ್ಧ ವಿಮಾನಗಳನ್ನು ಒದಗಿಸಬೇಕೆಂದು ಝೆಲೆನ್‌ ಸ್ಕಿ ಮನವಿ ಮಾಡಿದರು.

ಬೈಡನ್‌ ಭೇಟಿ ಬೆನ್ನಲ್ಲೇ ಕೀವ್‌ನಾದ್ಯಂತ ವೈಮಾನಿಕ ದಾಳಿಯ ಸೈರನ್‌ ಮೊಳಗಿಸಲಾಗುತ್ತಿದೆ. ಆದರೆ ರಷ್ಯಾ, ಈವರೆಗೆ ಕ್ಷಿಪಣಿ ಅಥವಾ ವೈಮಾನಿಕ ದಾಳಿ ನಡೆಸಿದ ಬಗ್ಗೆ ಯಾವುದೇ ವರದಿ ಇಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.