ADVERTISEMENT

17 ದೇಶಗಳ ನಾಗರಿಕರ ಪ್ರವೇಶಕ್ಕೆ ನಿರ್ಬಂಧ ಹೇರಿದ ಅಮೆರಿಕ: ಇಲ್ಲಿದೆ ಮಾಹಿತಿ

ಏಜೆನ್ಸೀಸ್
Published 17 ಡಿಸೆಂಬರ್ 2025, 3:09 IST
Last Updated 17 ಡಿಸೆಂಬರ್ 2025, 3:09 IST
<div class="paragraphs"><p>ಡೊನಾಲ್ಡ್ ಟ್ರಂಪ್</p></div>

ಡೊನಾಲ್ಡ್ ಟ್ರಂಪ್

   

ವಾಷಿಂಗ್ಟನ್‌: ರಾಷ್ಟ್ರೀಯ ಭದ್ರತಾ ಕಾಳಜಿ ದೃಷ್ಟಿಯಿಂದ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಹೊಸದಾಗಿ ಐದು ದೇಶಗಳನ್ನು ಮೂಲ ಪಟ್ಟಿಗೆ ಸೇರಿಸುವ ಮೂಲಕ ಪ್ರಯಾಣ ನಿಷೇಧವನ್ನು ವಿಸ್ತರಿಸಿದ್ದಾರೆ.

‘ಹೆಚ್ಚಿನ ಅಪಾಯದ ದೇಶಗಳ ಮೇಲೆ ಡೇಟಾ ಚಾಲಿತ ನಿರ್ಬಂಧಗಳನ್ನು ವಿಧಿಸುವ ಮೂಲಕ ಗಡಿಗಳು ಮತ್ತು ರಾಷ್ಟ್ರೀಯ ಭದ್ರತೆಯನ್ನು ಬಲಪಡಿಸುವ ಹೊಸ ನಿಯಮವನ್ನು ಟ್ರಂಪ್‌ ಜಾರಿಗೊಳಿಸಿದ್ದಾರೆ’ ಎಂದು ಶ್ವೇತಭವನ ಪ್ರಕಟಣೆಯಲ್ಲಿ ತಿಳಿಸಿದೆ.

ADVERTISEMENT

ಈ ನಿಯಮದ ಪ್ರಕಾರ, ಬುರ್ಕಿನಾ ಫಾಸೊ, ಮಾಲಿ, ನೈಜರ್, ದಕ್ಷಿಣ ಸುಡಾನ್ ಮತ್ತು ಸಿರಿಯಾ ದೇಶಗಳ ನಾಗರಿಕರು ಹಾಗೂ ಪ್ಯಾಲೆಸ್ಟೀನ್‌ ಪ್ರಾಧಿಕಾರ ನೀಡಿದ ಪ್ರಯಾಣ ದಾಖಲೆಗಳನ್ನು ಹೊಂದಿರುವ ವ್ಯಕ್ತಿಗಳಿಗೆ ಅಮೆರಿಕ ಪ್ರವೇಶಿಸುವುದನ್ನು ಸಂಪೂರ್ಣ ನಿಷೇಧಿಸಲಾಗಿದೆ.

ಟ್ರಂಪ್ ಆಡಳಿತವು ವಲಸೆ ಮಾನದಂಡಗಳನ್ನು ಬಿಗಿಗೊಳಿಸುತ್ತಿರುವುದರಿಂದ ಈ ಕ್ರಮ ಕೈಗೊಂಡಿದೆ ಎಂದು ಮೂಲಗಳು ತಿಳಿಸಿವೆ.

ಇದಕ್ಕೂ ಮುನ್ನ ಇದೇ ವರ್ಷ ಜೂನ್‌ನಲ್ಲಿ ಅಫ್ಗಾನಿಸ್ತಾನ, ಮ್ಯಾನ್ಮಾರ್, ಚಾಡ್, ಕಾಂಗೊ ಗಣರಾಜ್ಯ, ಈಕ್ವಟೋರಿಯಲ್ ಗಿನಿ, ಎರಿಟ್ರಿಯಾ, ಹೈಟಿ, ಇರಾನ್, ಲಿಬಿಯಾ, ಸೊಮಾಲಿಯಾ, ಸುಡಾನ್ ಮತ್ತು ಯೆಮನ್ ದೇಶಗಳ ನಾಗರಿಕರು ಅಮೆರಿಕಕ್ಕೆ ಪ್ರವೇಶಿಸುವುದನ್ನು ಸಂಪೂರ್ಣ ನಿಷೇಧಿಸಲಾಗಿತ್ತು.

ಅಮೆರಿಕದ ಹೊರಗೆ ಇರುವ ಮತ್ತು ಮಾನ್ಯತಾ ವೀಸಾ ಹೊಂದಿಲ್ಲದ ಬುರುಂಡಿ, ಕ್ಯೂಬಾ, ಲಾವೋಸ್, ಸಿಯೆರಾ ಲಿಯೋನ್, ಟೋಗೊ, ತುರ್ಕಮೆನಿಸ್ತಾನ, ವೆನೆಜುವೆಲಾ, ಗ್ಯಾಂಬಿಯಾ, ಮಲಾವಿ, ಮೌರಿಟಾನಿಯಾ, ನೈಜೀರಿಯಾ, ಸೆನೆಗಲ್, ಟಾಂಜಾನಿಯಾ, ಟೋಂಗಾ, ಜಾಂಬಿಯಾ ಮತ್ತು ಜಿಂಬಾಬ್ವೆ ದೇಶಗಳ ನಾಗರಿಕರ ಪ್ರವೇಶದ ಮೇಲೆ ನಿರ್ಬಂಧ ಹೇರಲಾಗಿದೆ. ಈ ನಿಯಮವು ಯಾವಾಗ ಕೊನೆಗೊಳ್ಳುತ್ತದೆ ಎಂದು ತಿಳಿದುಬಂದಿಲ್ಲ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.